ಹನೂರು ತಾಲ್ಲೂಕಿನಲ್ಲಿ ಕೃಪೆ ತೋರಿದ ಮಳೆರಾಯ : ಗರಿಗೆದರಿದ ಕೃಷಿ ಚಟುವಟಿಕೆ
ಅಕ್ಟೋಬರ್ 11, 2022
ಗೊಬ್ಬರ ದಾಸ್ತಾನು ಕೊರತೆಯಿಲ್ಲ : ಕೃಷಿ ಅಧಿಕಾರಿ
ವರದಿ-ಶಾರುಕ್ ಖಾನ್, ಹನೂರು
ಹನೂರು : ಕಳೆದ ಎರಡು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಬಂದಿದ್ದು, ರೈತರು ಜಮೀನುಗಳತ್ತ ಮುಖ ಮಾಡಿದ್ದಾರೆ. ಹೌದು ! ತಾಲೂಕಿನ ಎಲ್ಲ ಕಡೆಗಳಲ್ಲೂ ಅಲ್ಲಲ್ಲಿ ಮಳೆ ಬೀಳುತ್ತಿದ್ದೂ ಅದರಲ್ಲೂ ತಡರಾತ್ರಿ ಸುರಿದ ಜೋರು ಮಳೆಯಿಂದಾಗಿ ಕೃಷಿ ಚಟುವಟಿಕೆ ಗರಿಗೆದರಿವೆ. ಮಳೆಯಾಶ್ರಿತ ಜಮೀನುಗಳಲ್ಲಿ ರಾಗಿ ಜೋಳ ಕಡಲೆಕಾಯಿ ಬಿತ್ತನೆ ಮಾಡಿ ಚೆನ್ನಾಗಿ ಬಂದ ಪೈರಿಗೆ ಕಳೆ ಕೀಳುವ ಸಂದರ್ಭದಲ್ಲಿ ಮಳೆ ಬಾರದೇ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದರು. ಅಲ್ಲದೆ ಕಳೆದ ಬಾರಿ ಸಮರ್ಪಕವಾಗಿ ಮಳೆಯಾಗದ ಕಾರಣ ಸರಿಯಾದ ಪ್ರಮಾಣದಲ್ಲಿ ಬೆಳೆಗಳು ಕೈಸೇರದೆ ರೈತರು ಸೊರಗಿದ್ದರು.. ಈ ಬಾರಿ ಸಾಲ ಸೋಲ ಮಾಡಿ ಜಮೀನು ಹದಗೊಳಿಸಿ ರಾಗಿ ಜೋಳ ಕಡಲೆಕಾಯಿ ಹಾಕಿ ಇನ್ನೇನೋ ಕೈಗೆ ಬರಬೇಕು ಎನ್ನುವಷ್ಟರಲ್ಲಿ ಮಳೆಯಿಲ್ಲದೆ ಕಂಗಲಾಗಿದ್ದ ರೈತರಿಗೆ ಮಳೆರಾಯ ಕೃಪೆ ತೋರಿದ್ದಾನೆ. ಕಳೆದ ರಾತ್ರಿಯಿಂದ ಬೀಳುತ್ತಿರುವ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಗೊಬ್ಬರ ಹಾಕಲು ಸಿದ್ಧತೆ : ಮಳೆರಾಯ ಕೃಪೆ ತೋರಿದ್ದು ಇದೀಗ ಕಳೆ ತೆಗೆಸಲು ಹಾಗೂ ರಸಗೊಬ್ಬರ ಹಾಕಲು ರೈತರು ಹಾತೊರೆಯುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಎಲ್ಲರೂ ತುಂಬಾ ಬ್ಯುಸಿ ಎಂದರೆ ತಪ್ಪಾಗಲಾರದು. ಯಾವುದೇ ಗೊಬ್ಬರದ ಕೊರತೆ ಇಲ್ಲ. -ರಘುವೀರ್. ಕೃಷಿ ಅಧಿಕಾರಿಗಳು ಹನೂರು.
0 ಕಾಮೆಂಟ್‌ಗಳು