ಕೆ.ಶಿಪ್‍ನಿಂದ ಹನೂರು ಪಟ್ಟಣದ ರಸ್ತೆ ಅಗಲೀಕರಣ ಪ್ರಾರಂಭ

ಜೆಸಿಬಿ, ಇಟಾಚಿ ಕಾರ್ಯಾಚರಣೆಗೆ ಉರುಳಿದ ಕಟ್ಟಡಗಳು

ವರದಿ: ಶಾರುಕ್ ಖಾನ್ ಹನೂರು 

ಹನೂರು : ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ರಸ್ತೆಯ ಅಗಲಿಕರಣಕ್ಕೆ ಇಂದು ಚಾಲನೆ ನೀಡಲಾಯಿತು. ರಸ್ತೆ ಬದಿಯ ಅಂಗಡಿ ಮಳಿಗೆಗಳ ಮಾಲಿಕರು ತಮ್ಮ ಅಂಗಡಿಗಳ ಸರಕು ಸರಂಜಾಮುಗಳನ್ನು ತೆರವು ಮಾಡುವ ಮೂಲಕ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಿದರು.
ಕೊಳ್ಳೇಗಾಲದಿಂದ ಹನೂರಿನವರೆಗೆ 23 ಕಿ.ಮೀ ರಸ್ತೆ ಅಭಿವೃದ್ಧಿಗೆ 108 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಅಲ್ಲದೇ ಮಂಗಲ, ಕಾಮಗೆರೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಕಟ್ಟಡಗಳನ್ನು ತೆರೆವುಗೊಳಿಸಲಾಗಿತ್ತು. ಆದರೆ ಹನೂರು ಪಟ್ಟಣದಲ್ಲಿ ಅಂಗಡಿ ಮಳಿಗೆ ಕಟ್ಟಡವನ್ನು ತೆರೆವುಗೊಳಿಸಿರಲಿಲ್ಲ. ಈ ಸಂಬಂಧ ಕಟ್ಟಡ ಮಾಲೀಕರಿಗೆ ಹಲವು ಬಾರಿ ನೋಟೀಸ್ ನೀಡಲಾಗಿದ್ದರೂ, ಸಹ ಅಂಗಡಿಯನ್ನು ಖಾಲಿ ಮಾಡಿರಲಿಲ್ಲ. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. ಶಾಸಕರು ಕೆ.ಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರ ಪರಿಣಾಮವಾಗಿ ಕೆ.ಶಿಫ್ ಅಧಿಕಾರಿಗಳು ಪಟ್ಟಣದಲ್ಲಿ ಕಟ್ಟಡಗಳ ತೆರೆವಿನ ಕಾರ್ಯಕ್ಕೆ ಮುಂದಾಗಿದ್ದು, ಇದರಿಂದ ದಿನನಿತ್ಯ ಮಾದಪ್ಪನ ಸನ್ನಿಧಿಗೆ ಸಂಚರಿಸುವ ವಾಹನಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು