ಅಳಿವಿನಂಚಿನಲ್ಲಿರುವ ಉಡ ಬೇಟೆ : ಓರ್ವನ ಬಂಧನ

 ವರದಿ-ಶಾರುಕ್ ಖಾನ್, ಹನೂರು

ಹನೂರು : ಅಳಿವಿನಂಚಿನಲ್ಲಿರುವ ಉಡ ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯಾಧಿಕಾರಿಗಳು ಓರ್ವನನ್ನು ಬಂಧಿಸಿರುವ ಘಟನೆ ತಾಲ್ಲೂಕಿನ ದಂಟಳ್ಳಿ ಸಮೀಪದ ಕೆಂಪನಬೋರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹನೂರು ತಾಲ್ಲೂಕು ದಂಟಳ್ಳಿ ಗ್ರಾಮದ ಶಿವಮಾದೇವ ಬಂಧಿತ ಆರೋಪಿ. ಈತ ಹನೂರು ತಾಲ್ಲೂಕಿನ ಕಾವೇರಿ ಅರಣ್ಯ ಪ್ರದೇಶದ ದಂಟಳ್ಳಿ ಗಸ್ತಿನ ಸಿಪಿಟಿ 75ರ ಕೆಂಪನಬೋರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕೋಷ್ಟಕ ಪಟ್ಟಿಯಲ್ಲಿ ಸೇರ್ಪಡೆಯಾದ ಅದರಲ್ಲೂ ಆಳಿವಿನಂಚಿನಲ್ಲಿರುವ ಉಡ ಬೇಟೆಯಾಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಎಫ್‍ಒ ನಂದೀಶ್, ಎಸಿಎಫ್ ಅಂಕರಾಜು ಮಾರ್ಗದರ್ಶನಲ್ಲಿ ವಲಯ ಅರಣ್ಯಾಧಿಕಾರಿ ಲೋಕೇಶ್ ಚವ್ಹಾಣ್ ನೇತ್ರತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು