ನಾಳೆ ಪಿರಿಯಾಪಟ್ಟಣದಲ್ಲಿ ಈದ್ ಮೀಲಾದ್ ಕಾರ್ಯಕ್ರಮ : ಇಕ್ಬಾಲ್ ಬಾಳಿಲ ಫಿರೋಸ್ ಕುನ್ನುಮ್ ಪರಂಬಿಲ್, ಮುಸ್ತಫಾ ಹುದವಿ ಆಕೋಡ್ ಅವರಿಂದ ಪ್ರವಚನ

 ವರದಿ-ಪ್ರಸನ್ನ, ಪಿರಿಯಾಪಟ್ಟಣ

ಪಿರಿಯಾಪಟ್ಟಣ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸುವ ಈದ್ ಮಿಲಾದ್ ಕಾರ್ಯಕ್ರಮ ಅಕ್ಟೊಬರ್ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಲಬಾರ್ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಾಫಿ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಪ್ರತಿಯೊಂದು ಧರ್ಮವನ್ನು ಗೌರವಿಸುವುದು ಇಸ್ಲಾಂ ಧರ್ಮದ ಸಿದ್ಧಾಂತವೆಂದು ಜಗತ್ತಿಗೆ ಸಾರಿದ್ದಾರೆ. ಒಬ್ಬರಿಗೊಬ್ಬರು ಸಹಾಯ ಮಾಡುವುದರ ಮೂಲಕ ಸಹಬಾಳ್ವೆಯ ಜೀವನ ನಡೆಸಬೇಕು. ಆಗ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ಉಪದೇಶ ನೀಡಿದ್ದಾರೆ. ಪ್ರವಾದಿಯವರ ಆಧ್ಯಾತ್ಮಿಕ ಸಿದ್ಧಾಂತಗಳನ್ನು ಜಗತ್ತಿಗೆ ಸಾರುವ ಸಲುವಾಗಿ ಮಲಬಾರ್ ಜುಮಾ ಮಸೀದಿಯ ಆವರಣದಲ್ಲಿ ಕಮಿಟಿಯ ವತಿಯಿಂದ ಜಷ್ನೇ ಮೀಲಾದ್ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. 
ಸಂಜೆ 4 ಗಂಟೆಗೆ ಶಾಸಕ ಕೆ.ಮಹದೇವ್ ಸಮಾರಂಭ ಉದ್ಘಾಟಿಸಲಿದ್ದು, ಮಾಜಿ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಧರ್ಮಗುರುಗಳಾದ ಮಂಗಳೂರಿನ ಇಕ್ಬಾಲ್ ಬಾಳಿಲ ಮತ್ತು ಫಿರೋಸ್ ಕುನ್ನುಮ್ ಪರಂಬಿಲ್ ಮತ್ತು ಮುಸ್ತಫಾ ಹುದವಿ ಆಕೋಡ್ ರವರು ಪ್ರವಾದಿಯವರನ್ನು ಕುರಿತು ಅವರ ಸಂದೇಶಗಳ ಬಗ್ಗೆ ಮಾತನಾಡಲಿದ್ದಾರೆ. ಜತೆಗೆ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವಿದ್ದು, ಈ ಸಮಾರಂಭಕ್ಕೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕಾಗಿ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಲಬಾರ್ ಜುಮಾ ಮಸೀದಿಯ ಮಜೀದ್ ಬಾಖಾವಿ ಖತಿಬ್, ಕಾರ್ಯದರ್ಶಿ ಸೈದು ಎಚ್. ಪಿ., ನಿರ್ದೇಶಕರಾದ ಆಸ್ಕರ್, ನೌಷದ್ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು