28 ರಂದು ಅಭಿಮಾನಿಗಳಿಂದ ಚಿತ್ರನಟ ಜೆಪಿ ಹುಟ್ಟುಹಬ್ಬ ಆಚರಣೆ : ಆರೋಗ್ಯ ಶಿಬಿರ, ಅಂಗವಿಕಲರಿಗೆ ಸಲಕರಣೆ ವಿತರಣೆ
ಅಕ್ಟೋಬರ್ 25, 2022
ಮೈಸೂರು : ಅಕ್ಟೋಬರ್ 28ಕ್ಕೆ ಚಲನಚಿತ್ರ ನಟ, ನಿರ್ಮಾಪಕ ಜೆಪಿ (ಜಯಪ್ರಕಾಶ್) ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜೆಪಿ ಅಭಿಮಾನಿ ಬಳಗದ ಜಿಲ್ಲಾ ಕಾರ್ಯದರ್ಶಿ ಡಿ.ಮಹೇಶ್ ನಾಯಕ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾ ಡಿ, ಅಕ್ಟೋಬರ್ 28 ರಂದು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಂಜರಾಜ ಬಹಾದ್ದೂರ್ ಕಲ್ಯಾಣ ಮಂಟಪದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ವಿಶೇಷವಾಗಿ ಅಂಗವಿಕಲರಿಗೆ ಆರೋಗ್ಯ ತಪಾಸಣೆ ಮತ್ತು ವಿವಿಧ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ಹಿರಿಯ ನಾಗರಿಕರಿಗೆ ಕಣ್ಣಿಯ ತಪಾಸಣೆ, ಕನ್ನಡಕ ವಿತರಣೆ ಸೇರಿದಂತೆ ಉಚಿತವಾಗಿ ಔಷಧಿಯನ್ನೂ ಸಹ ನೀಡಲಾಗುತ್ತದೆ. ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಎಂದರು. 28 ರಂದು ಜೆಪಿ ಅಭಿಮಾನಿಗಳು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಪಿ ಅಭಿಮಾನಿ ಬಳಗದ ಪೈಲ್ವಾನ್ ನಾಗರಾಜು, ಅಶೋಕ್ ಸುಬ್ಬಣ್ಣ, ಆರ್.ಮಂಜುಳ ಮತ್ತು ಕೆ.ಮಂಜುಳ ಇದ್ದರು.
0 ಕಾಮೆಂಟ್‌ಗಳು