ಮೊದಲ ಕಾರ್ತಿಕ ಸೋಮವಾರ : ವಿಜೃಂಭಣೆಯಿಂದ ಜರುಗಿದ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹಾಲರವಿ ಕಳಶ ಉತ್ಸವ
ಅಕ್ಟೋಬರ್ 31, 2022
ಮೈಸೂರು : ಮೊದಲ ಕಾರ್ತಿಕ ಸೋಮವಾರದ ಪ್ರಯುಕ್ತ ನಗರದ ಲಷ್ಕರ್ ಮೊಹಲ್ಲಾ ಗರಡಿಕೇರಿಯಲ್ಲಿರುವ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹಾಲರವಿ ಕಳಶ ಉತ್ಸವ ನಡೆಯಿತು.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಲೆ ಮಹದೇಶ್ವರರಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ಧನ್ಯರಾದರು.
ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಂಗಾ ಪೂಜೆಯೊಂದಿಗೆ ಕಳಶ ತಂದು ಸ್ವಾಮಿಗೆ ಕಳಶ ಸ್ಥಾಪನೆ ಮಾಡಿ ಗಣಪತಿ ಮತ್ತು ಶನೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.
6.30ಕ್ಕೆ ಮಹಾ ರುಧ್ರಾಭಿಷೇಕ ನಡೆಯಿತು ನಂತರ 8.30ಕ್ಕೆ ಗರಡಿಕೇರಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ಹಾಲರವಿ ಕಳಶ ತರಲಾಯಿತು. 10 ಗಂಟೆಯಿಂದ ಸ್ವಾಮಿಯ ಸುವರ್ಣ ಕೊಳಗಕ್ಕೆ ವಿಶೇಷ ಅಭಿಷೇಕ ನಡೆಯಿತು. ನಂತರ ಮಲೆ ಮಹದೇಶ್ವರ ಸ್ವಾಮಿಗೆ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆದು ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ನಡೆಯಿತು.
6.30ಕ್ಕೆ ದೀಪೋತ್ಸವ ನಂತರ ಭಜನೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮೈಸೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಗೌರವ ಅಧ್ಯಕ್ಷ ಎಂ.ಶಿವಣ್ಣ, ಅಧ್ಯಕ್ಷರೂ ಮತ್ತು ಗುಡ್ಡಪ್ಪನವರಾದ ಎಂ.ಎಸ್.ರವಿಕುಮಾರ್. ವೆಂಕಟದಾಸಾಚಾರಿ, ಮಾದೇಶ್ ಶಿವಣ್ಣ, ಸುರೇಶ್ ಬಾಬು, ಆರ್.ಚಲುವಯ್ಯ ಮುಂತಾದವರು ಇದ್ದರು.
0 ಕಾಮೆಂಟ್‌ಗಳು