ಕನ್ನಡಪರ ಹೋರಾಟಗಾರ ಜಾಕೀರ್ ಹುಸೇನ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಅಕ್ಟೋಬರ್ 31, 2022
ಮೈಸೂರು : ಕನ್ನಡಪರ ಹೋರಾಟಗಾರ ಮತ್ತು ಡಿ.ದೇವರಾಜ ಅರಸು ಪ್ರತಿಮೆ ಪ್ರತಿμÁ್ಠಪನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್‍ಗೆ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜಾಕೀರ್ ಹುಸೇನ್ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಕನ್ನಡ ಸಾಂಸ್ಕøತಿಕ ಮತ್ತು ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಸಮಿತಿಯ ಜವಾಬ್ದಾರಿ ಹೊತ್ತು ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾಗಿದ್ದರು. ಮೈಸೂರು ಜಿಲ್ಲೆಯ 8 ತಾಲ್ಲೂಕು ಸಮ್ಮೇಳನಗಳಲ್ಲಿ ಹಾಗೂ ಗ್ರಾಮಾಂತರ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಕನ್ನಡದ ತೇರನ್ನು ಎಳೆದಿದ್ದರು. ಪ್ರಮುಖವಾಗಿ ಮೈಸೂರಿನ ಸಿ.ಎಫ್.ಟಿ.ಆರ್.ಐ.ಯಲ್ಲಿ ತಮಿಳು ಮೂಲದ ನಿರ್ದೇಶಕನ ಕನ್ನಡ ವಿರೋಧಿ ಚಟುವಟಿಕೆ ವಿರುದ್ಧ ಹೋರಾಟ ಮಾಡಿ ನಿರ್ದೇಶಕನನ್ನು ವರ್ಗಾವಣೆ ಮಾಡಿಸಿ ಆತನಿಂದ ಅಮಾತ್ತಾಗಿದ್ದ ಕನ್ನಡಿಗರನ್ನು ಅಮಾನತ್ತು ವಜಾಗೊಳಿಸಿ ಕನ್ನಡಗರಿಗೆ ನ್ಯಾಯ ಕೊಡಿಸುವಲ್ಲಿ ಅವರ ಕಾರ್ಯ ಶ್ಲಾಘನೀಯವಾಗಿತ್ತು. ಇವರ ಕನ್ನಡಪರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
0 ಕಾಮೆಂಟ್‌ಗಳು