ಎಲ್ಲೆಮಾಳ ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಅನುಷ್ಠಾನ ಅತ್ಯುತ್ತಮವಾಗಿದೆ : ಅಫ್ಸರ್ ಖಾನ್
ಅಕ್ಟೋಬರ್ 29, 2022
ಶಾಲೆಯಲ್ಲಿ ಆಹಾರದ ಗುಣಮಟ್ಟ ಮತ್ತು ಅಡುಗೆ ಮನೆ ಸ್ವಚ್ಛತೆ ಪರಿಶೀಲಿಸಿದ ಎಸ್‍ಡಿಎಂಸಿ ತಂಡ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಎಲ್ಲೆಮಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನ, ಮಕ್ಕಳು ತಿನ್ನುವ ಆಹಾರದ ಗುಣಮಟ್ಟ ಮತ್ತು ಅಡುಗೆ ಮನೆ ಸ್ವಚ್ಛತೆ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು. ಎಸ್‍ಡಿಎಂಸಿ ಅಧ್ಯಕ್ಷ ಅಫ್ಸರ್ ಖಾನ್ ಮಾತನಾಡಿ, ಶಾಲೆಯ ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಲಾಗಿದೆ. ದಾಸ್ತಾನು ಕೊಠಡಿ ನಿರ್ವಹಣೆ ಮತ್ತು ಶಾಲೆಯ ಉಪಾಧ್ಯಾಯರ ಮುತುವರ್ಜಿಯಿಂದ ಮಕ್ಕಳು ತಿನ್ನುವ ಆಹಾರವು ಗುಣಮಟ್ಟದಿಂದ ಕೂಡಿದೆ. ನಾವೂ ಸಹ ಊಟ ಮಾಡಿ ಪರೀಕ್ಷಿಸಿದ್ದೇವೆ. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗುವುದು. ಅಕ್ಷರದಾಸೋಹ ಅನುಷ್ಠಾನ ಇದೇ ರೀತಿ ಮುಂದುವರಿಯಬೇಕೆಂದು ಸಲಹೆ ನೀಡಿದರು. ಎಸ್‍ಡಿಎಂಸಿ ಸದಸ್ಯರಾದ ಅನ್ಸರ್ ಪಾμÁ, ಸೆಲ್ವಿ, ಮುಖ್ಯ ಶಿಕ್ಷಕರಾದ ಸುಗುಣ ಹಾಗೂ ಸಹಶಿಕ್ಷಕರು ಇದ್ದರು.
0 ಕಾಮೆಂಟ್‌ಗಳು