ಕಬ್ಬು ದರ ನಿಗದಿ ವಿಳಂಬ : ರಾಜ್ಯಾದ್ಯಂತ ಅ.27 ರಂದು ರಸ್ತೆ ತಡೆ ಚಳವಳಿ, 31ಕ್ಕೆ ಡಿಸಿ ಕಚೇರಿಗಳಿಗೆ ಮುತ್ತಿಗೆ

ಕುರುಬೂರು ಶಾಂತಕುಮಾರ್ ಘೋಷಣೆ

ಮೈಸೂರು : ರಾಜ್ಯ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರ ಪರಿಷ್ಕರಿಸಲು ಅಧಿಕಾರಿಗಳು ಮತ್ತು ಮಂತ್ರಿಗಳ ಜತೆ ನಾಲ್ಕು ಸಭೆಗಳನ್ನು ನಡೆಸಿದರೂ ಇದುವರೆಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡಿದ್ದಾರೆ ಇದನ್ನು ಖಂಡಿಸಿ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ. 
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಯಾವುದೇ ಶಾಸಕ, ಸಂಸದ, ಸಚಿವರು ಈ ಬಗ್ಗೆ ಮಾತನಾಡದೆ ಇರುವುದು ದುರ್ದೈವ ಇವರೆಲ್ಲರೂ ಸಕ್ಕರೆ ಕಾರ್ಖಾನೆಗಳ ಪರ ಇದ್ದಾರೆ ಎಂಬ ಅನುಮಾನ ಉಂಟಾಗಿದೆ. 30 ಲಕ್ಷ ಕಬ್ಬು ಬೆಳೆಗಾರರ 40 ಸಾವಿರ ಕೋಟಿ ವಹಿವಾಟು ನಡೆಸುವ ಈ ಉದ್ಯಮ ಸರ್ಕಾರಕ್ಕೆ ಲಾಭ ತರುತ್ತಿಲ್ಲವೇ, 5 ಸಾವಿರ ಕೋಟಿ ವ್ಯವಹಾರ ನಡೆಸುವ ಅಡಿಕೆ ಬೆಳೆಗಾರರ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ ರಾಜ್ಯದ ಗೃಹ ಸಚಿವರಿಗೆ ಹಾಗೂ ಎಂಪಿಗಳಿಗೆ ಕಬ್ಬು ಬೆಳೆಗಾರರ ಗೂಳಾಟ ಕಾಣುತ್ತಿಲ್ಲವೇ ಎಂದು ಟೀಕಿಸಿದ ಕುರುಬೂರು,
ರಾಜ್ಯ ಸರ್ಕಾರ ಮತ್ತು ಜನ ಪ್ರತಿನಿಧಿಗಳನ್ನು ಎಚ್ಚರಿಸಲು 27 ರಂದು ರಾಜ್ಯಾದ್ಯಂತ ಬೆಳಿಗ್ಗೆ 11 ರಿಂದ 1ಗಂಟೆ ತನಕ ರಸ್ತೆ ತಡೆ ಚಳುವಳಿ,
31 ರಂದು ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳ ಕಚೇರಿ ಮುತ್ತಿಗೆ ನಡೆಸಲಾಗುವುದು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು