ಕಾಡುಕೊತ್ತನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 2.20 ಕೋಟಿ ಅನುದಾನ : ಸಚಿವ ಗೋಪಾಲಯ್ಯ ಭರವಸೆ
ಅಕ್ಟೋಬರ್ 29, 2022
ಮದ್ದೂರು ತಾಲ್ಲೂಕು ಕಾಡುಕೊತ್ತನಹಳ್ಳಿ ಗ್ರಾಮ ಸಭೆಯಲ್ಲಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್, ಸಚಿವ ಗೋಪಾಲಯ್ಯ ಭಾಗಿ
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೋಕಿನ ಕಾಡು ಕೊತ್ತನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಕೇಂದ್ರ ಇಂಧನ ಹಾಗೂ ಬೃಹತ್ ಕೈಗಾರಿಕೆ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಭಾಗವಹಿಸಿದ್ದರು. ಈ ವೇಳೆ ಗ್ರಾಪಂ ಅಧ್ಯಕ್ಷ ದಯಾನಂದ ಹಾಗೂ ಗ್ರಾಮಸ್ಥರು ಊರಿನ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದ ಸಚಿವರಿಗೆ ಒಕ್ಕೂರಲಿನಿಂದ ಮನವಿ ಸಲ್ಲಿಸಿದಾಗ ಇದಕ್ಕೆ ಸ್ಪಂದಿಸಿದ ಸಚಿವ ಗೋಪಾಲಯ್ಯ, ಮುಖ್ಯಮಂತ್ರಿ ಜತೆ ಚರ್ಚೆ ಮಾಡಿ ಶೀಘ್ರದಲ್ಲೇ 2.20 ಕೋಟಿ ಅನುದಾನ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು. ನಂತರ ಮಾತನಾಡಿದ ಸಚಿವ ಕ್ರಿಶನ್ ಪಾಲ್ ಗುರ್ಜರ್, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭ್ರμÁ್ಟಚಾರ ರಹಿತ ಅಡಳಿತವನ್ನು ನೀಡಿದ್ದಾರೆ. ಯಾವುದೇ ಸಚಿವರು ಭ್ರμÁ್ಟಚಾರದಲ್ಲಿ ತೊಡಗದೆ ದಕ್ಷ ಆಡಳಿತವನ್ನು ನೀಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು. ಈ ಹಿಂದೆ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಚಿವರ ಬೆನ್ನು ಬೀಳಬೇಕಿತ್ತು. ಆದರೆ, ಮೋದಿಯವರ ದೂರದೃಷ್ಟಿಯಿಂದ ಇಂದು ಪ್ರತೀ ಗ್ರಾಪಂಗೆ ಕೋಟಿ ಕೋಟಿ ಅನುದಾನಗಳನ್ನ ನೀಡಲಾಗುತ್ತಿದೆ. ನಮ್ಮದು ರೈತಪರ ಆಡಳಿತವಾಗಿದ್ದು ಬೆಳೆ ಪರಿಹಾರಕ್ಕೆ ಪಸಲ್ ಭೀಮಾ ವಿಮಾ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಪ್ರತಿ ವರ್ಷಕ್ಕೆ 6 ಸಾವಿರ ಹಣ ನೀಡಲಾಗುತ್ತಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಉಪ ವಿಭಾಗಾಧಿಕಾರಿ ಐಶ್ವರ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ತಹಶೀಲ್ದಾರ್ ನರಸಿಂಹ ಮೂರ್ತಿ, ತಾಪಂ ಇಒ ಸಂದೀಪ್, ಗ್ರಾಪಂ ಸದಸ್ಯರು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು