ಪಾಂಡವಪುರ : ಅತ್ಯಾಚಾರ ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ

ಸಂತ್ರಸ್ತ ಬಾಲಕಿ 5 ಲಕ್ಷ ರೂ. ಪರಿಹಾರಕ್ಕೆ ಅರ್ಹಳು ಎಂದು ಹೇಳಿದ ನ್ಯಾಯಾಲಯದ  
ಪ್ರಸನ್ನ

ಮೈಸೂರು : ವಿವಾಹಿತ ಪುರುಷನೊಬ್ಬ ತನ್ನ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದ ವೇಳೆ ತಮ್ಮ ಚಿಕ್ಕಪ್ಪನ ಮಗಳಿಗೆ ಬೆದರಿಸಿ ಅತ್ಯಾಚಾರ ನಡೆಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಮೈಸೂರಿನ ಎಫ್.ಟಿ.ಎಸ್.ಸಿ. ವಿಶೇಷ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 
ಅಲ್ಲದೇ ಅಪ್ರಾಪ್ತ ಬಾಲಕಿಗೆ ವಂಚನೆ ಮಾಡಿ ಕೊಲೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ ಮತ್ತೇ 9 ತಿಂಗಳ ಸಾದಾ ಸಜೆ 11 ಸಾವಿರ ರೂ. ದಂಡವನ್ನೂ ವಿಧಿಸಿ, ನೊಂದ ಅಪ್ರಾಪ್ತ ಬಾಲಕಿ 5 ಲಕ್ಷ ರೂ. ಪರಿಹಾರ ಅರ್ಹಳು ಎಂದು ತೀರ್ಪು ನೀಡಿದೆ.
ಘಟನೆ ವಿವರ : ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಅಂತನಹಳ್ಳಿ ಗ್ರಾಮದ ಪ್ರಸನ್ನ ಬಿನ್ ರಾಮಕೃಷ್ಣ ಅತ್ಯಾಚಾರ ಆರೋಪಿ. ಈತ ಸಾಲಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ಎಲೆಮುದ್ದನಹಳ್ಳಿ ಗ್ರಾಮದ ಮಂಜುಳ ಎಂಬವರನ್ನು ವಿವಾಹವಾಗಿದ್ದನು.
ಮಂಜುಳ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದಾಗ ಆರೋಪಿ ಪ್ರಸನ್ನ ಎಲೆಮುದ್ದನಹಳ್ಳಿ ಗ್ರಾಮದ ಲಕ್ಷಮ್ಮ ಕೋಂ ಶಿವಕುಮಾರ್ ಎಂಬವರ ಮನೆಯಲ್ಲಿ ತನ್ನ ಚಿಕ್ಕಪ್ಪನ ಮಗಳು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುತ್ತೇನೆ. ಬಟ್ಟೆ ಕೊಡಿಸುತ್ತೇನೆ ಎಂದು ನಂಬಿಸಿ ಬಲವಂತವಾಗಿ ಅನೇಕ ಬಾರಿ ದೈಹಿಕ ಸಂಪರ್ಕ ಮಾಡಿ ನಂತರ ಯಾರಿಗೂ ಹೇಳಬೇಡ ಹೇಳಿದರೆ ಕೊಲೆ ಮಾಡುತ್ತಾನೆ ಎಂದು ಹೆದರಿಸಿದ್ದನು. ನಂತರ ಬಾಲಕಿ ಗರ್ಭಿಣಿಯಾಗಿ ಡಿಸೆಂಬರ್ 2020 ರಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಬಾಲಕಿಯ ತಾಯಿ ನೀಡಿದ್ದ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಸಾಲಿಗ್ರಾಮ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎಂ.ಆರ್.ಲವ ಅವರು, ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಾಮ ಕಮರೋಜ್ ಅವರು ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಅಕ್ಟೋಬರ್,18 ರಂದು ಆರೋಪಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕಾಗಿ 20 ವರ್ಷ ಕಠಿಣ ಸಜೆ ಹಾಗೂ 50 ಸಾವಿರ ರೂ. ದಂಡವನ್ನು, ಅಲ್ಲದೇ ಅಪ್ರಾಪ್ತ ಬಾಲಕಿಗೆ ವಂಚನೆ ಮಾಡಿ ಕೊಲೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ ಮತ್ತೇ 9 ತಿಂಗಳ ಸಾದಾ ಸಜೆ 11 ಸಾವಿರ ರೂ. ದಂಡವನ್ನೂ ವಿಧಿಸಿ, ನೊಂದ ಅಪ್ರಾಪ್ತ ಬಾಲಕಿ 5 ಲಕ್ಷ ರೂ. ಪರಿಹಾರ ಅರ್ಹಳು ಎಂದು ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ.ಜಯಂತಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು