ಎಲ್‍ಐಸಿ ಪ್ರತಿನಿಧಿಗಳ ಕಲ್ಯಾಣಕ್ಕಾಗಿ ಸಹಕಾರ ಸಂಘ ಸ್ಥಾಪನೆ : ಎಸ್.ಕೆ.ಮಂಜುನಾಥ್

ಪಾಂಡವಪುರದಲ್ಲಿ ಎಲ್‍ಐಸಿ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಪ್ರಥಮ ಸಭೆ

ಪಾಂಡವಪುರ : ಎಲ್‍ಐಸಿ ಪ್ರತಿನಿಧಿಗಳ ದಿನನಿತ್ಯದ ಬದುಕೇ ಒಂದು ಹೋರಾಟವಾಗಿದ್ದು, ಅವರೆಲ್ಲರ ಕಲ್ಯಾಣಕ್ಕಾಗಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದೆ ಎಂದು ಎಲ್‍ಐಸಿ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ಎಸ್.ಕೆ.ಮಂಜುನಾಥ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸಹಕಾರ ಸಂಘದ ಸದಸ್ಯರ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಅಭಿವೃದ್ಧಿ ಸಹಕಾರ ಮತ್ತು ಸಂಘಟನೆಯಿಂದ ಮಾತ್ರ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ನೂತನ ಸಂಘವನ್ನು ಅಭಿವೃದ್ಧಿ ಪಡಿಸುವುದು ಎಲ್ಲಾ ಪ್ರತಿನಿಧಿ ಷೇರುದಾರರ ಜವಾಬ್ದಾರಿಯಾಗಿದೆ. ಯಾ ವುದೇ ಸಹಕಾರ ಸಂಘಗಳು ಮುನ್ನಡೆಯಲು ಪ್ರಾಮಾಣಿಕ ವ್ಯವಹಾರಗಳು ಮುಖ್ಯವಾಗಿವೆ. ಸಂಘದಿಂದ ಸಾಲ ಸೌಲಭ್ಯ ಪಡೆದವರು ಅದನ್ನು ನಿಗದಿತ ಅವಧಿಯಲ್ಲಿ ಮರುಪಾ ವತಿಸಿದರೆ ಮಾ ತ್ರ ಮತ್ತೊಬ್ಬರಿಗೆ ನೆರವಾಗಲು ಸಾಧ್ಯ. ಇಂದು ಕಡಿಮೆ ಷೇರುದಾರರಿಂದ ಪ್ರಾರಂಭವಾದ ಈ ಸಹಕಾರ ಸಂಘ ಮುಂದೆ ಬೃಹದಾಕಾರವಾಗಿ ಬೆಳೆದರೆ ಅದರ ಶ್ರೇಯಸ್ಸು ನಿಮ್ಮೆಲ್ಲರಿಗೂ ಸಲ್ಲುತ್ತದೆ ಎಂದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಮನೋಹರ್ ಮಾತನಾಡಿ, ಸದಸ್ಯರ ಸಹಕಾರವೇ ಸಂಘದ ಅಭಿವೃದ್ಧಿಗೆ ಕಾರಣವಾಗುತ್ತದೆ. ಹಣಕಾಸು ವ್ಯವಹಾರದಲ್ಲಿ ಪ್ರಾಮಾಣಿಕತೆ ಮುಖ್ಯ. ಆಡಳಿತ ಮಂಡಳಿಗೆ ಆಯ್ಕೆಯಾದವರು ಮತ್ತು ಸಂಘದಿಂದ ಸಾಲ ಸೌಲಭ್ಯ ಪಡೆದವರು ಪ್ರಾಮಾಣಿಕತೆಯಿಂದ ಸಂಘವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದ ಪ್ರವರ್ತಕರನ್ನು ಗೌರವಿಸಲಾಯಿತು. ಮಹೇಶ್ ಬಾಬು ಸ್ವಾಗತಿಸಿ, ನಂಜುಂಡಸ್ವಾಮಿ ವಂದಿಸಿದರು.

ಕಾರ್ಯಕ್ರಮದಲ್ಲಿ ಷೇರುದಾರರಾದ ಮಹದೇವ್ ಎಂಬವರು ಹತ್ತು ಸಾವಿರ ರೂಪಾಯಿ ಠೇವಣಿ ಹಣವನ್ನು ಸಂಘದ ಮುಖ್ಯ ಪ್ರವರ್ತಕ ಮಂಜುನಾಥ್ ಅವರಿಗೆ ನೀಡಿದರು. ಬಳಿಕ ಅವರು ಮಾತನಾ ಡಿ, ಸಂಘದ ಪ್ರ ತಿ ಷೇರುದಾರರು ತಲಾ ಹತ್ತು ಸಾವಿರ ಠೇವಣಿ ಇಟ್ಟರೆ ಸಂಘಕ್ಕೆ 5 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿ ಸಂಘದ ವ್ಯವಹಾರ ಸುಲಲಿತವಾಗಿ ನಡೆಯಲು ಅನುಕೂಲವಾಗುತ್ತದೆ ಎಂದರು.
ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕೆ.ಶಿವರಾಮೇಗೌಡ, ಶ್ರೀನಿವಾಸ್, ಬೆಟ್ಟೇಗೌಡ, ಎಂ.ರಾಮಣ್ಣ, ಉಮಾಶಂಕರ್, ವಾಸುದೇವ್, ಸಿದ್ದಪ್ಪಾಜಿ, ರಮೇಶ್, ಗೋವಿಂದ, ಲೋಹಿತ್, ಚಂದ್ರೇಗೌಡ, ಭಾರತಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಇನ್ನಿತರರು ಇದ್ದರು.

ಸಂಘವನ್ನು ಬೆಳೆಸುವುದೇ ನಮ್ಮ ಗುರಿ

ಎಲ್‍ಐಸಿ ಪ್ರತಿನಿಧಿಗಳ ಬದುಕೇ ಒಂದು ಹೋರಾಟವಾಗಿದೆ. ಇದರಿಂದ ನಮ್ಮ ಕಷ್ಟಕ್ಕೆ ನೆರವಾಗಲೆಂದು ಎಲ್‍ಐಸಿ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ಸ್ಥಾಪನೆ ಮಾಡಲಾಗಿದೆ. ಸರ್ಕಾರದಿಂದ ಅನುಮೋದನೆ ಪಡೆದು ಕಾನೂನುಗಳನ್ನು ಪಾಲಿಸಿ ಸಂಘ ಸ್ಥಾಪಿಸಿದ್ದೇವೆ. ಷೇರುದಾರರು ತಮ್ಮ ಪ್ರಾಮಾಣಿಕ ತೊಡಗಿಸಿಕೊಳ್ಳುವಿಕೇ ಮೂಲಕ ಸಂಘವನ್ನು ಅಭಿವೃದ್ಧಿ ಪಡಿಸಬೇಕು.

ಚಂದ್ರೇಗೌಡ, ಪ್ರವರ್ತಕರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು