ಪಾಂಡವಪುರ : ಇಂದು 10 ಗಂಟೆಗೆ ಮಹದೇಶ್ವರ ಜ್ಯೋತಿ ಆಗಮನ

ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಸ್ವಾಗತಕ್ಕೆ ಭರದ ಸಿದ್ಧತೆ

ಪಾಂಡವಪುರ : ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಈ ತಿಂಗಳ 13 ರಿಂದ 16ರವರೆಗೆ ನಡೆಯಲಿರುವ ಮಹಾ ಕುಂಭಮೇಳಕ್ಕೆ ಶ್ರೀ ಮಲೈಮಹದೇಶ್ವರ ಬೆಟ್ಟದಿಂದ ಆಗಮಿಸುತ್ತಿರುವ ಮಹದೇಶ್ವರ ಜ್ಯೋತಿಯು ಇಂದು (ಅ.10) ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಪಾಂಡವಪುರ ರೈಲ್ವೆ ನಿಲ್ದಾಣದ ಬಳಿಯ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಎದುರು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ.
ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ವಿವಿಧ ಮುಖಂಡರು ಮಹದೇಶ್ವರ ಜ್ಯೋತಿಯ ಸ್ವಾಗತಕ್ಕೆ   
ಸಂಪೂರ್ಣ ಸಿದ್ಧತೆ ನಡೆಸಿದ್ದು, ಬಳಿಕ ಜ್ಯೋತಿಯು ಆರತಿ ಉಕ್ಕಡ, ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಕಟ್ಟೇರಿ, ಹಾಗನಹಳ್ಳಿ, ಬೇಬಿ, ಕೆ.ಬೆಟ್ಟಹಳ್ಳಿ, ಗುಮ್ಮನಹಳ್ಳಿ, ಚಿನಕುರಳಿ, ನಾರಾಯಣಪುರ, ಜಕ್ಕನಹಳ್ಳಿ, ಕದಲಗೆರೆ ಸೇರಿದಂತೆ ಇತರೆ ಗ್ರಾಮಗಳ ಮಾರ್ಗಗಳಲ್ಲಿ ಸಂಚರಿಸಿ ಮೇಲುಕೋಟೆಗೆ ತಲುಪಿ ಅಲ್ಲಿಯೇ ತಂಗಲಿದೆ.


ಪ್ರತಿ 9 ವರ್ಷಕ್ಕೊಮ್ಮೆ ಮಹಾಕುಂಭಮೇಳ ನಡೆಯಲಿದ್ದು, ಸುಮಾರು 6ರಿಂದ 7ಲಕ್ಷ ಜನರು ಸೇರಲಿದ್ದಾರೆ. ಇದೊಂದು ಪುಣ್ಯ ಕಾರ್ಯವಾಗಿರುವ ಹಿನ್ನೆಲೆಯಲ್ಲಿ ಜನರು ಜಾತ್ಯಾತೀತ, ಪಕ್ಷತೀತವಾಗಿ ಪಾಲ್ಗೊಂಡು ಮಹದೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಡಾ.ಇಂದ್ರೇಶ್ ಮನವಿ ಮಾಡಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು