ಸುಳ್ಳೇರಿಪಾಳ್ಯ ಸೊಸೈಟಿಗೆ ೧.೧೯ ಲಕ್ಷ ರೂ. ಲಾಭ : ಖಲಂದರ್ ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ


 ವರದಿ-ಹನೂರು ಶಾರೂಖ್ ಖಾನ್

ಹನೂರು : ತಾಲೂಕಿನ ಸುಳ್ಳೇರಿಪಾಳ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವು ಮಂಗಳವಾರ ಸಂಘದ ಆವರಣದಲ್ಲಿ ನಡೆಯಿತು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಖಲಂದರ್ ಪಾಷಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ೨೦೨೧-೨೨ ಸಾಲಿನಲ್ಲಿ ನಡೆದಿರುವ ಆಯವ್ಯಯ ವಿವರಗಳನ್ನು ಮಂಡಿಸಲಾಯಿತು. 
ಇದೇವೇಳೆ ಮಾತನಾಡಿದ ಅಧ್ಯಕ್ಷ ಕಲಂದರ್ ಪಾಷಾ, ಸಂಘದಲ್ಲಿ ಒಟ್ಟು ೨ ಕೋಟಿ ೧೪ ಲಕ್ಷ ಸಾಲವನ್ನು ನೀಡಲಾಗಿದ್ದು, ಹೊಸದಾಗಿ ೯೪ ಸದಸ್ಯರಿಗೆ ಒಂದು ಕೋಟಿ ರೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ೨೦೨೧-೨೨ನೇ ಸಾಲಿನಲ್ಲಿ ಸಹಕಾರ ಸಂಘವು ೧.೧೯ ಲಕ್ಷ ರೂ. ಲಾಭದಲ್ಲಿ ನಡೆಯುತ್ತಿದೆ. ಸಹಕಾರ ಸಂಘದ ಸರ್ವ ಸದಸ್ಯರ ಸರಕಾರದಿಂದ ಈ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರ್ವ ಸದಸ್ಯರಿಗೂ ತಲುಪಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಇರ್ಷದ್ ಅಹಮದ್ ಷರೀಫ್, ಸಹಕಾರ ಸಂಘದ ಮೆಲ್ವಿಚಾರಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಬಾಲಾಜಿ ನಾಯಕ್ ಹಾಗೂ ಸಂಘದ ಉಪಾಧ್ಯಕ್ಷ ಕಾಳೇಗೌಡ, ನಿರ್ದೇಶಕರಾದ ಮುತ್ತೇಗೌಡ, ವಸಂತ, ಚನ್ನೇಗೌಡ, ಗುರು ಹಾಗೂ ಇನ್ನಿತರ ಸದಸ್ಯರು ರೈತ ಮುಖಂಡರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು