ಖಾಯಮಾತಿ ಪೌರಕಾರ್ಮಿಕರ ಕಣ್ಣೊರೆಸುವ ತಂತ್ರ ಸರ್ಕಾರದ ವಿರುದ್ಧ ರಾಜಾ ಕಿಡಿ

 

ಮೈಸೂರು : ಖಾಯಮಾತಿ ಆದೇಶ ಕೇವಲ ಪೌರಕಾರ್ಮಿಕರ ಕಣ್ಣೊರೆಸುವ ಸರ್ಕಾರದ ತಂತ್ರವಾಗಿದೆ ಎಂದು ಮೈಸೂರು ಮಹಾನಗರಪಾಲಿಕೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಜ ಆರೋಪಿಸಿದ್ದಾರೆ,

ಮೈಸೂರು ಮೇಲ್.ಕಾಂ ನೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೪೨ ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರನ್ನೂ ಖಾಯಂ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಆದರೆ, ನಿವೃತ್ತರಾದ ೧೧ ಸಾವಿರ ಖಾಯಂ ಪೌರಕಾರ್ಮಿಕರ ಸ್ಥಾನವನ್ನಷ್ಟೆ ಸರ್ಕಾರ ಭರ್ತಿ ಮಾಡಿರುವುದು ಹೆಚ್ಚುಗಾರಿಕೆ ಏನಲ್ಲ. ಅವರಿಗೆ ಈಗಾಗಲೇ ಸರ್ಕಾರದ ಸಂಬಳ, ಭತ್ಯೆ ಬರುತ್ತಿತ್ತು. ಹೊಸದಾಗಿ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಅನಕ್ಷರಸ್ತ ಪೌರಕಾರ್ಮಿಕರನ್ನು ವಂಚಿಸುವುದನ್ನು ಬಿಟ್ಟು ಹಾಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ೪೨ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಖಾಯಂ ಮಾಡಿ ಅವರಿಗೆ ಸೂಕ್ತ ಸಂಬಳ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು