ಹಳೇ ವೈಷಮ್ಯದಿಂದ ಯುವಕನ ಕತ್ತು ಕುಯ್ದು ಭೀಕರ ಹತ್ಯೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನೀಲನಹಳ್ಳಿ ಗೇಟ್ ಬಳಿ ಘಟನೆ 

ವರದಿ-ವಿಶ್ವನಾಥ್, ಪಾಂಡವಪುರ

ಪಾಂಡವಪುರ : ಹಳೇ ವೈಷಮ್ಯದಿಂದ ಮೊಬೈಲ್ ಅಂಗಡಿ ಮಾಲೀಕನೊಬ್ಬನನ್ನು ರೌಡಿ ಶೀಟರ್‍ಗಳು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ನೀಲನಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.
ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ದನು ಅಲಿಯಾಸ್ ಧನಂಜಯ ಕೊಲೆಯಾದ ಯುವಕ.
ನೀಲನಹಳ್ಳಿ ಸಮೀಪದ ಢಾಬಾದಲ್ಲಿ ರಾತ್ರಿ ಊಟ ಮುಗಿಸಿ ಮನೆಗೆ ತೆರಳುವಾಗ ದಾರಿ ಮಧ್ಯೆ ಧನಂಜಯ್ಯನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 
ಘಟನೆಯಿಂದ ಈ ಭಾಗದ ಜನ ಬೆಚ್ಚಿ ಬಿಳ್ಳುವಂತಾಗಿದೆ. 
ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ರೌಡಿಶೀಟರ್ ತನ್ನ ಸಹಚರರೊಂದಿಗೆ ಕೊಲೆ ಮಾಡಿದ್ದಾನೆ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದ್ದು, 
ಪರಾರಿಯಾಗಿರುವ ಕೊಲೆಗಡುಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಕೊಲೆಯಾದ ಧನು ಅಲಿಯಾಸ್ ಧನಂಜಯ್ಯ ಪಾಂಡವಪುರ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು