ದಸರಾ ಯುವ ಸಂಭ್ರಮ : ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾದ ಕಲಾತಂಡಗಳ ನೃತ್ಯ ಪ್ರದರ್ಶನ

 ವರದಿ-ನಜೀರ್ ಅಹಮದ್, ಪಾಂಡವಪುರ

ಮೈಸೂರು : ನವದುರ್ಗೆಯರ ದರ್ಶನ, ವಿಘ್ನ ನಿವಾರಕನ ಆರಾಧನೆ, ಶಿವನ ಸ್ಮರಣೆಯ ಮೂಲಕ ಯುವ ಸಂಭ್ರಮಕ್ಕೆ ಆಗಮಿಸಿದ್ದ ಜನರನ್ನು ವಿವಿಧ ಕಲಾತಂಡಗಳು ತಮ್ಮ ನೃತ್ಯದ ಮೂಲಕ ಭಕ್ತಿಯ ಲೋಕಕ್ಕೆ ಕರೆದೊಯ್ದರು.
ಬುಧವಾರ ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಯುವ ಸಂಭ್ರಮದಲ್ಲಿ ಕಂಡುಬಂದ ದೃಶ್ಯ. ಕೊಳ್ಳೆಗಾಲದ ನಿಸರ್ಗ ಪದವಿ ಪೂರ್ವ ಕಾಲೇಜು ತಂಡದವರು ನವಶಕ್ತಿ ವೈಭವದ ಹಾಡಿಗೆ ನೃತ್ಯ ಮಾಡುವ ಮೂಲಕ ನವದುರ್ಗೆಯರ ದರ್ಶನವನ್ನು ತೋರಿಸುವ ಮೂಲಕ ನೆರೆದಿದ್ದ ಜನರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ದರು.ವೇದಿಕೆಯ ಮೇಲೆ ಮಹಿಷಾಸುರ, ರಕ್ತ ಬೀಜಾಸುರರನ್ನು ವಧಿಸುವ ದೃಶ್ಯ ಮರುಸೃಷ್ಠಿ ಮಾಡುವ ಮೂಲಕ ನರೆದಿದ್ದ ಜನರನ್ನು ಮೂಕವಿಸ್ಮಿತರನ್ನಾಗಿಸಿತು.
ಆಪ್ತಮಿತ್ರ ಖ್ಯಾತಿಯ ಶ್ರೀಧರ್ ಜೈನ್ ಮತ್ತು ತಂಡದವರು ಮಾಡಿದ ಸತ್ಯ ಹರಿಶ್ಚಂದ್ರ ಚಿತ್ರದ ಮತ ಕೀಳ್ಯಾವುದೋ ಹುಚ್ಚಪ್ಪ, ರಘು ಧಿಕ್ಷಿತ್ ಅವರ ಲೋಕದ ಕಾಳಜಿ ಮಾಡುತಿನಂತಿ ಹಾಡಿಗೆ ಮನಮೋಹಕ ನೃತ್ಯ  ನೆರೆದಿದ್ದ ಸಭಿಕರನ್ನು ತಲೆದೂಗುವಂತೆ ಮಾಡಿದರು.
ಮೈಸೂರಿನ ಸದ್ವಿದ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ತಂಡದವರು ನೃತ್ಯದ ಮೂಲಕವೇ ಭಾರದಲ್ಲಿರುವ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ನೃತ್ಯವನ್ನು ಮಾಡುವ ಮೂಲಕ ವಿವಿಧತೆಯಲ್ಲಿ ಏಕತೆ ಇರುವುದನ್ನು ನೃತ್ಯದ ಮೂಲಕ ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.
ಡಿಕೆಡಿ ಖ್ಯಾತಿಯ ಪವನ್ ಮಾಸ್ಟರ್ ಹಾಗೂ ರುದ್ರ ಮಾಸ್ಟರ್ ತಂಡದವರು ಪುನೀತ್ ನಟಿಸಿರುವ ನಟಸಾರ್ವಭೌಮ, ರಾಜಮುಮಾರ್ ಚಿತ್ರದ ಟ್ವಿಂಕಲ್ ಲಿಟಲ್ ಸ್ಟಾರ್, ಹಾಗೂ ದರ್ಶನ್ ಅಭಿನಯದ ಯಜಮಾನ ಚಿತ್ರದ ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುಮ ಬಾರೆ, ಮತ್ತು ಸುದೀಪ್ ಚಿತ್ರದ ಹಾಡಾದ ರಾ..ರಾ.. ರಕ್ಕಮ್ಮ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.


 ಮೈಸೂರು ಜಿಲ್ಲಾ ನೃತ್ಯ ನಿರ್ದೇಶಕರ ಕಲಾತಂಡದವರು ಚಾಮರಾಜ್ ಅವರ ನೇತೃತ್ವದಲ್ಲಿ ಹೃತಿಕ್ ರೋಷನ್ ಚಿತ್ರದ ಅಗ್ನಿಪಥ್ ಚಿತ್ರದ ದೇವಾ ಶ್ರೀ ಗಣೇಶ, ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದ ಯಾರೇ ನೀನು ರೋಜಾ ಹೂವೆ, ಯುದ್ಧಕಾಂಡ ಚಿತ್ರದ ಕುಡಿಯೋದೆ ನನ್ನ ವಿಕ್ನೆಸು ಹಾಗೂ ಕೆ.ಜಿ.ಎಫ್ ಚಿತ್ರದ ಹಾಡುಗಳಿಗೆ ನರ್ತಿಸುವ ಮೂಲಕ ಹುಬ್ಬೆರಿಸುವಂತೆ ಮಾಡಿದರು. 

ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬ್ರದರ್ ಫ್ರಮ್ ಅನದರ್ ಬ್ರದರ್, ಸುದೀಪ್ ನಟಿಸಿರುವ ವಿಕ್ರಾಂತ್ ರೋಣ, ಟಗರು ಹಾಗೂ ದಿ ವಿಲನ್ ಚಿತ್ರದ ಹಾಡುಗಳು ಬರುತ್ತಿದ್ದಂತೆ ವೇದಿಕೆ ಮೇಲೆ ನೃತ್ಯ ಮಾಡುವವರ ಜೊತೆಗೂ ಮೈದಾನದಲ್ಲಿ ನೆರೆದಿದ್ದ ಯುವ ಸಮೂಹ ಸಹ ಕುಣಿದು ಕುಪ್ಪಳಿಸಿದರು. ಮಂಗಳೂರಿನ ವಿಯಾನ್ಸ್ ತಂಡದವರು ಮಾಡಿದ ತಯ್ಯಂ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿತು.

ಮೆರಗು ತಂದ ಕನ್ನಿಕಾ ಆಗಮನ : ಯುವ ಸಂಭ್ರಮದ ೨ನೇ ದಿನದ ಕಾರ್ಯಕ್ರಮಕ್ಕೆ ಮೆರಗು ತಂದಿದ್ದು ಬಾಲಿವುಡ್ ಕನ್ನಿಕಾ ಕಪೂರ್ ಆಗಮನ. ವೇದಿಕೆ ಮೇಲೆ ಕನ್ನಿಕಾ ಕಪೂರ್ ಆಗಮಿಸುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಗಳಿಂದ ಬರಮಾಡಿಕೊಂಡರು.

ನಂತರ ಕನ್ನಿಕ ಕಪೂರ್ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಮಸ್ತ್ ಕಲಂದರ್, ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದ ಹು ಅಂಟಾವಾ ಮಾವ ಹಾಗೂ ಬಾಲಿವುಡ್ ಚಿತ್ರದ ಹಾಡುಗಳನ್ನು  ಹಾಡುವುದರ ಜೊತೆಗೆ ನರ್ತಿಸಿ ಅಭಿಗಳನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಯುವ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಕಿರಣ್ ಗೌಡ, ಉಪಾಧ್ಯಕ್ಷ ಬದ್ರಿಶ್, ಉಪ ವಿಶೇಷಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಕಾರ್ಯಾಧ್ಯಕ್ಷ ವೆಂಕಟರಾಜು ಸೇರಿದಂತೆ ಇತರರು ಹಾಜರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು