ಸೋಮವಾರ ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್‍ನಲ್ಲಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದ ರೈತರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್, ವರಿಷ್ಠರಾದ ಸುನೀತಾ ಪಟ್ಟಣಯ್ಯ, ಕಾರ್ಯಧ್ಯಕ್ಷರಾದ ವೀರಸಂಗಯ್ಯ, ಮಂಡ್ಯ ಜಿಲ್ಲೆ ಅಧ್ಯಕ್ಷರಾದ ಎ.ಎಲ್.ಕೆಂಪೂಗೌಡ, ಪ್ರಸನ್ನ ಎನ್.ಗೌಡ, ಮಧುಸೂದನ್, ತಗ್ಗಳ್ಳಿ ಪ್ರಸನ್ನ, ಹೊಸೂರ್ ಕುಮಾರ್, ರಾಜ್ಯ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ನಂದಿನಿ ಜಯರಾಮ್ ಸೇರಿದಂತೆ ಹಲವಾರು ಮುಖಂಡರು, ಸಾವಿರಾರು ರೈತರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು