ವರದಿ-ಶಾರೂಖ್ ಖಾನ್, ಹನೂರು
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಮೂಲಕ ಸ್ಪರ್ಧಿಸಲು ಪಾಳ್ಯ ಬಿ.ಜಯಸುಂದರ ಸಿದ್ಧತೆ ನಡೆಸಿದ್ದು, ವರಿಷ್ಠರ ಆಶೀರ್ವಾದಕ್ಕಾಗಿ ಕಾಯುತ್ತಿದ್ದಾರೆ.
ಪ್ರಸ್ತುತ ಬಿಜೆಪಿ ಜಿಲ್ಲಾ ಎಸ್‍ಟಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಜಯಸುಂದರ ಅವರು,
ಕಳೆದ ಹಲವಾರು ವರ್ಷಗಳಿಂದಲೂ ಕ್ಷೇತ್ರದಲ್ಲಿ ಸಕ್ರಿಯವಾಗಿ ರಾಜಕಾರಣ ಮಾಡುತ್ತಿದ್ದು, ಮುಂದಿನ ಸಾರ್ವತ್ರಿಕಾ ಚುನಾವಣೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ,
ಮೂಲತಃ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದ ಬಿ.ಜಯಸುಂದರ್‍ರವರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಉತ್ಸುಕರಾಗಿದ್ದು, ಈ ಸಂಬಂಧ ಕ್ಷೇತ್ರದಲ್ಲಿ ಹಲವಾರು ಜನೋಪಯೋಗಿ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಕಳೆದ ಬಾರಿ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಬಿ. ಜಯ ಸುಂದರ ತಮ್ಮ ಪತ್ನಿಯನ್ನು ನಿಲ್ಲಿಸಿದ್ದು, ಕೇವಲ ಅಲ್ಪ ಮತಗಳಲ್ಲಿ ಪರಭಾವಗೊಂಡಿದ್ದರು. ಸ್ನೇಹಜೀವಿಯಾಗಿರುವ ಜಯಸುಂದರ ಅವರ ಪತ್ನಿಗೆ ಗೆಲವು ನಿಶ್ಚಿತವಾಗಿತ್ತಾದರೂ, ಕೆಲವು ಕಾರಣಗಳಿಂದ ಹಿನ್ನಡೆ ಅನುಭವಿಸಬೇಕಾಯಿತು.
ಇದೀಗ ಕ್ಷೇತ್ರದ ಜನರಿಗೆ ಹಾಗೂ ಮುಖಂಡರಿಗೆ ಜಯಸುಂದರ ಅವರ ಪತ್ನಿಯ ಸೋಲಿನ ಬಗ್ಗೆ ಬೇಸರ ಉಂಟಾಗಿದೆ.
ಸರಳ ಮತ್ತು ಸಜ್ಜನ ವ್ಯಕ್ತಿಯಾಗಿರುವ ಜಯಸುಂದರ ಎಲ್ಲರ ಜೊತೆ ಬೆರೆತು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಾರ್ಯಕರ್ತರ ಜೊತೆ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಹೆಗಲು ಕೊಟ್ಟು ಪಕ್ಷ ಸಂಘಟಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೇವಲ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಾ ಸದಾ ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಜಯಸುಂದರ ಅವರು ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿಸುವಂತೆ ಅಭಿಮಾನಿಗಳು ಕಾರ್ಯಕರ್ತರು ಒತ್ತಡ ಹೇರುತ್ತಿದ್ದು, ಮತದಾರ ಪ್ರಭು ಕೂಡ ಇವರನ್ನು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.
ಚಾಮರಾಜನರಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲೂ ನಾಯಕ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುವ ಕಾರಣ ಮತದಾರರಾಗಿದ್ದು ಶೇಕಡ 100ಕ್ಕೆ 80 ರಷ್ಟು ಹೆಚ್ಚು ಮತದಾರರು ಬಿಜೆಪಿ ಜೊತೆ ಗುರುತಿಸಿಕೊಂಡಿರುವುದೂ ಸಹ ಜಯಸುಂದರ ಗೆಲುವಿಗೆ ಶ್ರೀರಕ್ಷೆಯಾಗಬಹುದು ಎನ್ನಲಾಗಿದೆ.
ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಎಸ್‍ಟಿ ಸಮುದಾಯಕ್ಕೆ ಮೀಸಲಿಡುವ ವಿಶ್ವಾಸವೂ ಇದ್ದು ಯುವ ಮುಖಂಡ ಜಯಸುಂದರ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ವಿಶ್ವಾಸವನ್ನು ಕ್ಷೇತ್ರದ ಜನತೆ ವ್ಯಕ್ತಪಡಿಸುತ್ತಿದ್ದಾರೆ.
0 ಕಾಮೆಂಟ್‌ಗಳು