-ಟಿ.ಬಿ.ಸಂತೋಷ ಮದ್ದೂರು
ಮದ್ದೂರು : ತಾಲೂಕಿನ ಸವಾರ್ಂಗೀಣ ಅಭಿವೃದ್ಧಿಗೆ ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ರಾಜಕೀಯ ಆಧಿಕಾರ ಅಗತ್ಯವಾಗಿದ್ದು, ಅಭಿಮಾನಿಗಳ ಒತ್ತಾಯದಿಂದ ರಾಜಕೀಯ ಪ್ರವೇಶ ಮಾಡಬೇಕು ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಕಾಡು ಕೋತ್ತನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯದ ಭವನ ವೀಕ್ಷಣೆ ಮಾಡಿ ಕಾಡುಕೋತ್ತನಹಳ್ಳಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮದ್ದೂರು ತಾಲೂಕಿನ ಸವಾರ್ಂಗೀಣ ಅಭಿವೃದ್ಧಿಗೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಮದ್ದೂರನ್ನು ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿಪಡಿಸಲು ರಾಜಕೀಯ ಅಧಿಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಅಭಿಮಾನಿಗಳು ಕಾರ್ಯಕರ್ತರು ಒಕ್ಕೊರಲಿನಿಂದ ರಾಜಕೀಯ ಪ್ರವೇಶಕ್ಕೆ ಒತ್ತಡ ಹೇರುತ್ತಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಸನ್ನಿವೇಶಗಳು ಸೃಷ್ಟಿಯಾದಲ್ಲಿ ಕ್ಷೇತ್ರದ ಜನತೆಯ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ಕದಲೂರು ಉದಯ್‍ರವರು ನಿಸ್ವಾರ್ಥ ಮನೋಭಾವದಿಂದ ಕ್ಷೇತ್ರದಾದ್ಯಂತ ನೊಂದವರ ದನಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ ಅವರ ನಿಸ್ವಾರ್ಥ ಸೇವೆಯೂ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ನಿವೃತ್ತ ಪ್ರಾಧ್ಯಾಪಕ ಬೋರೇಗೌಡ, ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ, ತಾಪಂ ಮಾಜಿ ಸದಸ್ಯ ಕಪನಿಗೌಡ, ಬೋರೇಗೌಡ, ಕೆ.ಸಿ.ಮಹದೇವು, ತಾಪಂ ಮಾಜಿ ಸದಸ್ಯ ದೊಡ್ಡಣ್ಣ, ಚೌಲ್ಟ್ರೀ ವೆಂಕಟೆಗೌಡ, ಸಿಪಾಯಿ ಶ್ರೀನಿವಾಸ, ದಾಸೆಗೌಡ, ಭುಜುವಳ್ಳಿ ರಾಮಚಂದ್ರೇಗೌಡ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು