ಮೈಸೂರು : ವಿಶ್ವದೆಲ್ಲೆಡೆ ತನ್ನ ಶಾಖೆಗಳನ್ನು ಹೊಂದಿರುವ ಶ್ರೀರಾಮಚಂದ್ರ ಮಿಷನ್ ಅಂಗ ಸಂಸ್ಥೆಯಾದ ಹಾರ್ಟ್ಫುಲ್‌ನೆಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಇತರರಿಗಾಗಿ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾರ್ಯಕರ್ತರಾದ ಶ್ಯಾಮಲಾಕೃಷ್ಣ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಬಂಧ ಸ್ಪರ್ಧೆಯು ೧೪ ರಿಂದ ೧೮ ವರ್ಷ ವಯಸ್ಸಿನೊಳಗಿನವರಿಗಾಗಿ `ಕರುಣೆಯನ್ನು ಕಾರ್ಯರೂಪಕ್ಕಿಳಿಸುವುದೇ ದಯೆ’ ಹಾಗೂ ೧೯ ರಿಂದ ೨೫ ವರ್ಷ ವಯಸ್ಸಿನೊಳಗಿನವರಿಗಾಗಿ `ದಯೆಯಿಂದ ಪ್ರವರ್ಧಮಾನ’ ಎಂಬ ವಿಷಯ ಒಳಗೊಂಡಿದೆ.
ಪ್ರಬಂಧ ರಚನೆ ವೇಳೆ ಸ್ಪರ್ಧಿಗಳು ತಮ್ಮ ಸುತ್ತಮುತ್ತಲಿನ ಪರಿಸರ ಗಮನಿಸಬೇಕು. ಜಾಗತಿಕ ಮಟ್ಟದ ಒಂದು ಸಮಸ್ಯೆಯನ್ನ ಕೈಗೆತ್ತಿಕೊಂಡು ಗುರುತಿಸಿ ವಿಶ್ವಸಂಸ್ಥೆಯ ಒಂದು ಅಥವಾ ಎರಡು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ನಿರ್ದಿಷ್ಟವಾಗಿ ಹೋಲಿಸಿ, ಸಂಪನ್ಮೂಲಗಳು, ಅಗತ್ಯ ಆರ್ಥಿಕ ವಿವರ ಹಾಗೂ ಪರಿಹಾರ ಸೂಚಿಸುವ ಮಾಹಿತಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕೆಂದರು.
ಹೆಚ್ಚಿನ ಮಾಹಿತಿಗೆ ದೂ. ೯೪೪೯೪ ೪೫೬೪೧ ನ್ನು ಸಂಪರ್ಕಿಸಬಹುದೆಂದರು.
0 ಕಾಮೆಂಟ್‌ಗಳು