ವರದಿ-ಪ್ರಕಾಶ್, ಪಿರಿಯಾಪಟ್ಟಣ
ಪಿರಿಯಾಪಟ್ಟಣ : ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮತ್ತು ಅವರ ಕಾರು ಚಾಲಕ ಷರೀಪ್ ಎಂಬುವವರ ಮೇಲೆ ಜಾತಿ ನಿಂದನೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಶಿವಯ್ಯ ಎಂಬುವವರು ನೀಡಿದ ದೂರು ಆಧರಿಸಿ ಪಿರಿಯಾಪಟ್ಟಣ ಪೊಲೀಸ್‌ರು ಎಫ್‌ಐಆರ್ ದಾಖಲಿಸಿದ್ದಾರೆ.
ತಾಲೂಕು ಮಟ್ಟದ ಕ್ರೀಡಾಕೂಟದ ಅನುದಾನಕ್ಕೆ ಸಂಬಂಧಿಸಿದಂತೆ ಸೆ.೧೭ರಂದು ವಾಹನದಲ್ಲಿ ಕುಳಿತು ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನನ್ನನು ನಿಂದಿಸಿದ್ದು, ಜಾತಿ ನಿಂದನೆ ಮಾಡಿದ್ಧಾರೆ. ಅಲ್ಲದೆ ವಾಹನ ಚಾಲಕ ಷರೀಫ್ ಕೂಡ ಇದರಲ್ಲಿ ಭಾಗಿಯಾಗಿದ್ದು, ಈತನೂ ಸಹ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಕ್ರಮ ವಹಿಸಿರುವ ಪೊಲೀಸರು ಎಸ್ಸಿ,ಎಸ್ಟಿ ದೌರ್ಜನ್ಯ ಕಾಯಿದೆ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ಧಾರೆ.
ಚಾಲಕ ಷರೀಫ್ ಮತ್ತು ಬಿಇಒ ಬಸವರಾಜು ಜೀಪ್‌ನಲ್ಲಿ ತೆರಳುವಾಗ ಪರಸ್ಪರ ಸಂಭಾಷಣೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಇಬ್ಬರೂ ದಲಿತರನ್ನು ಅವಹೇಳನ ಮಾಡಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಕ್ರಮ ವಹಿಸುವಂತೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯ ಮುಖಂಡರಾದ ಟಿ.ಈರಯ್ಯ. ಸೀಗೂರು ವಿಜಯ್‌ಕುಮಾರ್. ಎಚ್.ಡಿ. ರಮೇಶ್. ಪಿಪಿ ಮಹಾದೇವ್. ಪುಟ್ಟಯ್ಯ. ರಾಮಚಂದ್ರ. ಬೇಗೂರು ಮಹಾದೇವ್ ಕೂಡ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಿ.ಎಂ.ಶಿವಯ್ಯರವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.
ಡಿಡಿಪಿಐ ಭೇಟಿ
ಘಟನೆಗೆ ಸಂಬಂಧಿಸಿದಂತೆ ನಾಳೆ ಪಿರಿಯಾಪಟ್ಟಣಕ್ಕೆ ಡಿಡಿಪಿಐ ರಾಮಚಂದ್ರರಾಜೇಅರಸ್ ಭೇಟಿ ನೀಡಲಿದ್ದು, ಆಡಿಯೋಗೆ ಸಂಬಂಧಿಸಿದಂತೆ ಬಿಇಒ ಬಸವರಾಜು ಮತ್ತು ಚಾಲಕ ಷರೀಫ್‌ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ಧಾರೆ ಎಂದು ಕಚೇರಿಯ ಮೂಲಗಳು ತಿಳಿಸಿವೆ.
0 ಕಾಮೆಂಟ್‌ಗಳು