ಸಾವು ಬದುಕಿನ ಹೋರಾಟದಲ್ಲಿ ಪ್ರದೀಪ್ ಕುಮಾರ್ ಲೀವರ್, ಕಿಡ್ನಿ ವೈಫಲ್ಯ, ಚಿಕಿತ್ಸೆಗೆ ೩೦ ಲಕ್ಷ ಕೇಳಿದ ವೈದ್ಯರು, ಆತಂಕದಲ್ಲಿ ಕುಟುಂಬ, ನೆರವಿಗಾಗಿ ದಾನಿಗಳ ಮೊರೆ

 ವರದಿ-ಮೊಹಮ್ಮದ್ ಶಬ್ಬೀರ್, ಕೆ.ಆರ್.ನಗರ

ಕೆ.ಆರ್.ನಗರ : ಸೆ.೨೧ : ಲೀವರ್ ಮತ್ತು ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ನರಳುತ್ತಿರುವ ೨೮ ವರ್ಷದ ಯುವಕನೊಬ್ಬನ ಜೀವ ಉಳಿಸಲು ದಾನಿಗಳು ಮುಂದಾಗಬೇಕಿದೆ.
ಕೆ.ಆರ್.ನಗರ ತಾಲ್ಲೂಕಿನ ನಾರಾಯಣಪುರ ಗ್ರಾಮದ ನಿವಾಸಿ ರೈತಾಪಿ ಕುಟುಂಬದ ಕುಮಾರ್ ರವರ ಪುತ್ರ ಪ್ರದೀಪ್‌ಕುಮಾರ್ ಹಲವಾರು ತಿಂಗಳಿನಿಂದ ಲಿವರ್ ಮತ್ತು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಗೆ ೩೦ ಲಕ್ಷ ರೂ. ಬೇಕಿರುವ ಕಾರಣ ದಾನಿಗಳ ನೆರವು ಬಯಸಿದ್ದಾರೆ.
ಪ್ರದೀಪ್ ಕುಮಾರ್ ಆರ್ಥಿಕವಾಗಿ ತೀರಾ ಬಡವರು. ಕುಟುಂಬಕ್ಕೆ ಆಧಾರವಾಗಿದ್ದ ಅವರೇ ಈಗ ಹಾಸಿಗೆ ಹಿಡಿದಿದ್ದು, ಪತಿಯ ಸೂಕ್ತ ಚಿಕಿತ್ಸೆಗಾಗಿ ಪ್ರದೀಪ್ ಪತ್ನಿ ದಾನಿಗಳ ನೆರವು ನೀಡುವಂತೆ ಮನವಿ ಮಾಡಿದ್ದಾರೆ. 
ಸ್ವಯಂ ಉದ್ಯೋಗಿಯಾಗಿ ತಮ್ಮ ಪುಟ್ಟ ಸಂಸಾರವನ್ನು ಕಟ್ಟಿಕೊಂಡಿದ್ದ ಪ್ರದೀಪ್ ಅವರಿಗೆ ಇದ್ದಕ್ಕಿದ್ದಂತೆ ಲೀವರ್ ಮತ್ತು ಕಿಡ್ನಿ ಸಮಸ್ಯೆ ಉಂಟಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸದರಿ ಚಿಕಿತ್ಸೆಗೆ ಅಪಾರವಾದ ಹಣ ಬೇಕಿರುವುದರಿಂದ ತೀರಾ ಬಡ ಕುಟುಂಬದವರಾದ ಕುಮಾರ್ ತಮ್ಮ ಮಗ ಪ್ರದೀಪನ ಆಸ್ಪತ್ರೆಯ ಬಿಲ್ ಪಾವತಿಸಲಾಗದೆ ತಮ್ಮ ಸ್ವಗ್ರಾಮಕ್ಕೆ ಮಗನನ್ನು ಕರೆತಂದಿದ್ದಾರೆ.

ಆದರೆ, ಸ್ಥಳೀಯ ಜೆಡಿಎಸ್ ಮುಖಂಡ ರುದ್ರೇಶ್ ತಾವೂ ಸಹ ಅಲ್ಪಸ್ವಲ್ಪ ಹಣಕಾಸಿನ ನೆರವು ನೀಡಲು ಮುಂದಾಗಿದ್ದು, ಚಿಕಿತ್ಸೆಗಾಗಿ ಇನ್ನೂ ೩೦ ಲಕ್ಷ ರೂ. ಅಗತ್ಯವಿದೆ. ಮದುವೆಯಾಗಿ ಒಂದು ಪುಟ್ಟ ಹೆಣ್ಣುಮಗುವಿರುವ ಪ್ರದೀಪ್ ಕುಮಾರ್ ಅವರನ್ನು ಮಾನವೀಯತೆ ದೃಷ್ಟಿಯಿಂದ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಬದುಕಿ ಬಾಳಬೇಕಾದ ಈ ಕುಟುಂಬಕ್ಕೆ ಎಲ್ಲರೂ ಧನಸಹಾಯ ಮಾಡಬೇಕಾಗಿದ್ದು, ದಾನಿಗಳು  

ಮೊಬೈಲ್ ಸಂಖ್ಯೆ ೭೦೨೬೪೯೮೭೨೯ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಥವಾ ಕರ್ನಾಟಕ ಬ್ಯಾಂಕ್, ಕೆಆರ್ ನಗರ ಶಾಖೆಯ ಖಾತೆ ನಂ. ಲತ-೪೧೩೨೫೦೦೧೦೩೦೯೦೮೦೧ ಐಎಫ್‌ಎಸ್‌ಸಿ ಕೆಎಆರ್‌ಬಿ೦೦೦೦೪೧೩ ಕ್ಕೆ ಹಣ ಸಂದಾಯ ಮಾಡಬಹುದು.

fêÀzÁ£À ±ÉæÃµÀ×zÁ£À


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು