ಸಂಬಂಧಿಕರಿಗೆ ಸಹೋದರಿಯ ತಿಥಿ ಕಾರ್ಡ್ ಕೊಡಲು ಹೋಗಿದ್ದಾಗ ನಡೆದ ದುರ್ಘಟನೆ
ಪಾಂಡವಪುರ : ಪಲ್ಸರ್ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಐದು ದೀಪದ ವೃತ್ತದ ಬಳಿ ನಡೆದಿದೆ.
ತಾಲೂಕಿನ ಅಂತನಹಳ್ಳಿ ಗ್ರಾಮದ ವಸಂತ್ (೨೬) ಮೃತ ವ್ಯಕ್ತಿ. ಘಟನೆಯಲ್ಲಿ ಹಿಂಬದಿ ಕುಳಿತಿದ್ದ ಅದೇ ಗ್ರಾಮದ ಮಂಜುನಾಥ್ (೩೦) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಎರಡು ಕಾಲುಗಳು ಮುರಿದಿವೆ.
ತಾಲೂಕಿನ ಅಂತನಹಳ್ಳಿ ಗ್ರಾಮದ ವಸಂತ್ (೨೬) ಮೃತ ವ್ಯಕ್ತಿ. ಘಟನೆಯಲ್ಲಿ ಹಿಂಬದಿ ಕುಳಿತಿದ್ದ ಅದೇ ಗ್ರಾಮದ ಮಂಜುನಾಥ್ (೩೦) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಎರಡು ಕಾಲುಗಳು ಮುರಿದಿವೆ.
ಘಟನೆ ವಿವರ : ಮೃತ ವಸಂತ್ ಹಾಗೂ ಗಾಯಾಳು ಮಂಜುನಾಥ್ ಅವರು ಇತ್ತೀಚೆಗೆ ಮೃತಪಟ್ಟ ತಮ್ಮ ಸಹೋದರಿಯ ತಿಥಿ ಕಾರ್ಡ್ನ್ನು ಸಂಬಂಧಿಕರಿಗೆ ಕೊಡಲು ಮೈಸೂರು ಕಡೆಯಿಂದ ಪಾಂಡವಪುರದ ಕಡೆಗೆ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ನಾರಾಯಣಪುರ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಪಾಂಡವಪುರ ಬಸ್‌ನಿಲ್ದಾಣಕ್ಕೆ ತಿರುವು ಪಡೆದುಕೊಳ್ಳುವ ವೇಳೆ ಐದು ದೀಪದ ವೃತ್ತದ ವೃತ್ತದ ಬಳಿ ಬೈಕ್‌ಗೆ ಡಿಕ್ಕಿಯಾಗಿದೆ.
ತೀವ್ರ ರಕ್ತಸ್ರಾವಕ್ಕೊಳಗಾದ ವಂಸತ್ ಸ್ಥಳದಲ್ಲೇ ಮೃತಪಟ್ಟರು. ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಮಂಜುನಾಥ್ ಅವರ ಎರಡು ಕಾಲುಗಳ ಮೇಲೆ ಬಸ್ ಹರಿದ ಪರಿಣಾಮ ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು.
ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ : ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಈ ದುರಂತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗವೇ ಕಾರಣವಾಗಿದ್ದು ಮೃತ ವಸಂತ್ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸುಮಾರು ೨೦ ನಿಮಿಷಗಳವರೆಗೆ ಪಟ್ಟಣದ ಐದು ದೀಪದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.



