ಮದ್ದೂರು : ಮಣಿಗೆರೆ ಸೊಸೈಟಿ ವಾರ್ಷಿಕ ಸಭೆಯಲ್ಲಿ ಗದ್ದಲ: ವಾರ್ಷಿಕ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದ ಷೇರುದಾರರು

 

ವರದಿ-ಬಿ.ಸಂತೋಷ, ಮದ್ದೂರು

ಮದ್ದೂರು : ತಾಲೂಕಿನ ಕೆ.ಪಿ.ದೊಡ್ಡಿ ಗ್ರಾಮದಲ್ಲಿರುವ ಮಣಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಿಗೂ ಹಾಗೂ ಆಡಳಿತ  ಮಂಡಳಿಯವರಿಗೂ ವಾಗ್ವಾದ ಏರ್ಪಟ್ಟಿ ಗದ್ದಲ ಉಂಟಾಗಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ  ಸಂಘದ ಆಡಳಿತ ಮಂಡಳಿ ವಿರುದ್ಧ ನಡಾವಳಿ ಬರೆಸಿ ವಾರ್ಷಿಕ ಸಭೆಯನ್ನು ಮುಂದೂಡುವಂತೆ ಆಕ್ಷೇಪ ವ್ಯಕ್ತಪಡಿಸಿದರು. 
ಸಭೆ ಆರಂಭವಾಗುತ್ತಿದ್ದಂತೆ ಕಳೆದ ವಾರ್ಷಿಕ ಮಹಾ ಸಭೆಯ  ನಡವಳಿಗಳನ್ನು ಪ್ರಶ್ನೆ ಮಾಡುತ್ತಾ, ಕಳೆದ ಅರೇಳು ವರ್ಷಗಳಲ್ಲಿ  ಸಂಘದಲ್ಲಿ ನಡೆದಿದ್ದ ಹಗರಣಗಳ ಸಂಬಂಧಿಸಿದಂತೆ ಚರ್ಚೆ ನಡೆಸಿ ಸದಸ್ಯರು ವಾಗ್ವಾದ ನಡೆಸಿದರು. 
ಸಂಘದ ಸದಸ್ಯ ಹಾಗೂ ಗ್ರಾಪಂ ಸದಸ್ಯರೂ ಆದ ಸಿದ್ದರಾಜು ಮಾತನಾಡಿ, ಕಳೆದ ಸಾಲಿನಲ್ಲಿ ಸಂಘದಲ್ಲಿನ ಲಾಭಾಂಶಕ್ಕೆ ಸಂಬಂಧಿಸಿದಂತೆ ಷೇರುದಾರರಿಗೆ ಡಿವಿಡೆಂಟ್ ಹಂಚಿಕೆ, ಮರಣ ನಿಧಿ, ನೌಕರರ ವೇತನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು.  
ಸಂಘದ ಅಧ್ಯಕ್ಷ ರಾಜೇಶ್ ಮಾತನಾಡಿ, ಸಂಘವು ನಷ್ಟದಲ್ಲಿದ್ದು, ಹಂತ ಹಂತವಾಗಿ ಚೇತರಿಕೆ ಕಾಣುತ್ತಿದೆ. ಅಲ್ಲದೇ, ಷೇರು ಡಿವೇಡೆಂಟ್ ಹಂಚಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
ಸಂಘದ ಸರ್ವ ಸದಸ್ಯರು ಆಡಳಿತ ಮಂಡಳಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದುವರೆಗೆ ಯಾವುದೇ ಲೆಕ್ಕ ಪತ್ರಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಸರ್ವ ಸದಸ್ಯರ ಒಪ್ಪಿಗೆ ಮೆರೆಗೆ ಸಭೆಯಲ್ಲಿ ನಡಾವಳಿಯನ್ನು ಬರೆಸಿ ಸಭೆಯನ್ನು ಮುಂದೂಡಲು ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಪಾರ್ವತಮ್ಮ, ನಿರ್ದೇಶಕರಾದ ಪೂಜಾರಿ ಮಹೇಶ್, ಕೆಪಿ ದೊಡ್ಡಿ ಗಿರೀಶ್, ಗ್ರಾಪಂ ಸದಸ್ಯರಾದ ಶ್ರೀನಿವಾಸ, ಮಣಿಗೆರೆ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು