ಹಿಟ್ನೆಹೆಬ್ಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವಿನೋದ್ ಕುಮಾರ್ ಅವಿರೋಧ ಆಯ್ಕೆ

 ವರದಿ : ಕೆ.ಎಸ್.ಪ್ರಕಾಶ್, ಪಿರಿಯಾಪಟ್ಟಣ

ಪಿರಿಯಾಪಟ್ಟಣ : ತಾಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವಿನೋದ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಮ್ಮ  ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರ ಸ್ಥಾನಕ್ಕೆ ವಿನೋದ್ ಕುಮಾರ್, ಉಪಾಧ್ಯಕ್ಷರ ಸ್ಥಾನಕ್ಕೆ ಪಾರ್ವತಮ್ಮ  ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪ್ರಸಾದ್ ರವರು ವಿನೋದ್ ಕುಮಾರ್ ರವರನ್ನು ಅಧ್ಯಕ್ಷರಾಗಿ, ಪಾರ್ವತಮ್ಮರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಿದರು.  
ನೂತನವಾಗಿ ಆಯ್ಕೆಯಾದ ವಿನೋದ್ ಕುಮಾರ್ ಪಾರ್ವತಮ್ಮರವರನ್ನು  ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ, 
ಹಿಟ್ನೆಹೆಬ್ಬಾಗಿಲು ಗ್ರಾಮವು ದೊಡ್ಡದಾಗಿರುವುದರಿಂದ ಸಂಘದ ಅಭಿವೃದ್ಧಿಗೆ ಬಡ್ಡಿ ರಹಿತವಾಗಿ ೪ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷ ವಿನೋದ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ,   ಶಾಸಕ ಕೆ.ಮಹದೇವ್ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಸೂಚನೆ ಮೇರೆಗೆ ನಿರ್ದೇಶಕರು ನನ್ನನ್ನು ನಂಬಿ ಅವಿರೋಧ ಆಯ್ಕೆ ಮಾಡಿದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜತೆಗೆ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ಹರೀಶ್ ಕಗ್ಗುಂಡಿ, ನಿರ್ದೇಶಕರಾದ ತಮ್ಮೇಗೌಡ, ಜವರಪ್ಪ, ಮಹದೇವ್, ಗೋವಿಂದ, ಶಶಿಕುಮಾರ್, ದಶರಥ, ಶ್ರೀನಿವಾಸ್, ಲೋಲಾಕ್ಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಂಕರ್ ಮುಖಂಡರಾದ ಮಹದೇವ್, ನಾಗಣ್ಣ, ಕೃಷ್ಣ, ಸುರೇಶ್ ಹಾಜರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು