ಮೈಸೂರು : ನಗರದ ವಿವಿ ಪುರಂ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಬಾಲಕರನ್ನು ಬಂಧಿಸಿ, ೩.೨೫ ಲಕ್ಷ ರೂ. ಮೌಲ್ಯದ ೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ವಿವಿ ಪುರಂ ಪೊಲೀಸರು ಯಾದವಗಿರಿಯ ಬ್ರಿಡ್ಞ್ ಬಳಿ ಶುಭೋದಯ ಪಾಯಿಂಟ್ ಕರ್ತವ್ಯದಲ್ಲಿದ್ದಾಗ ನಂಬರ್ ಪ್ಲೇಟ್
ಇಲ್ಲದ ಒಂದು ಸ್ಕೂಟರ್‌ನಲ್ಲಿ ಬಂದ ೩ ಜನ ಬಾಲಕರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಅವರು ಸಮಂಜಸ ಉತ್ತರ ನೀಡದಿದ್ದಾಗ ವಾಹನವನ್ನು ಪರಿಶೀಲಿಸಿದಾಗ ಅದು ಕಳವು ಮಾಡಿದ ವಾಹನ ಎಂದು ತಿಳಿದುಬಂದಿತ್ತು.
ಬಾಲಕರ ತೀವ್ರ ವಿಚಾರಣೆ ನಡೆಸಿದಾಗ ಅವರು ಮೈಸೂರು, ಹಾಸನ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಹೇಳಿದರು ಎನ್ನಲಾಗಿದೆ.
ವಿವಿ ಪುರಂ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ, ಪಿಎಸ್‌ಐ ಲೇಪಾಕ್ಷ. ಎಎಸ್‌ಐ ಸಿದ್ದರಾಜು. ಸಿಬ್ಬಂದಿಗಳಾದ ರವಿಗೌಡ. ಚಾಮುಂಡಮ್ಮ, ಮಹೇಶ. ಪರಶುರಾಮ ರಾಥೋಡ, ಈರಣ್ಣ, ಉಮೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 ಕಾಮೆಂಟ್‌ಗಳು