ಮೈಸೂರು : ರಾಹುಲ್ ಗಾಂಧಿ ಜೈಲಿನ ಅನುಭವ ಕೇಳಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌ನವರು ಭಯ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ತಪುö್ಪ ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ. ಯಾರಿಗೆ ಭಯ ಇರುತ್ತೋ ಅವರು ಹೀಗೆಲ್ಲ ಕೇಳಿಕೊಳ್ಳುತ್ತಾರೆ. ನಾನು ಭಯ ಪಡುತ್ತೀನಾ..? ಪ್ರತಾಪ್ ಸಿಂಹ ಭಯ ಪಡುತ್ತಾರಾ ? ಭಯ ಮತ್ತು ಭ್ರಮೆಯಲ್ಲಿ ಕಾಂಗ್ರೆಸ್ ನವರು ಬದುಕುತ್ತಿದ್ದಾರೆ ಎಂದರು.
ಮೈಸೂರು ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುವ ಹಿನ್ನೆಲೆ, ರಾಷ್ಟ್ರಪತಿಗಳು ದಸರಾಗೆ ಬರುತ್ತಾ ಇರುವುದು ಇದೇ ಮೊದಲು. ದೈವಭಕ್ತಿ ಹೊಂದಿರುವ ರಾಷ್ಟ್ರಪತಿಗಳು ಪ್ರವಾಸದ ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ ಎಂದು ಅವರು ತಿಳಿಸಿದರು.
ಮೈಸೂರು ಜನರಲ್ಲಿ ವಿಶೇಷ ನಿವೇದನೆ ಮಾಡಿದ ಪ್ರಹ್ಲಾದ ಜೋಶಿ, ಮೈಸೂರಿಗರು ಬಹುದೊಡ್ಡ ಸಂಖ್ಯೆಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬನ್ನಿ. ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಮಾಡಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಬಗ್ಗೆ ಅನಂತರ ಮಾತನಾಡುತ್ತೇನೆ ಎಂದರು.
0 ಕಾಮೆಂಟ್‌ಗಳು