ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ‘ಎಐ ಚಾಲಿತ ಎಂಆರ್‌ಐ’ ಸೇವೆ ಪ್ರಾರಂಭ : ಮುಂದಿನ ನಾಲ್ಕು ಭಾನುವಾರ ಉಚಿತ ತಪಾಸಣೆ

ವರದಿ : ನಿಷ್ಕಲ ಎಸ್., ಮೈಸೂರು

ಮೈಸೂರು: ನಗರದ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಭಾರತ್ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಸ್ಥೆ (ಬಿಎಚ್‌ಐಒ)ಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ಚಾಲಿತ ಎಂಅರ್‌ಐ (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) ಸೇವೆಯನ್ನು ಬಿಎಚ್‌ಐಒ ಅಧ್ಯಕ್ಷ ಡಾ.ಬಿ.ಎಸ್. ಅಜಯ್‌ಕುಮಾರ್ ಉದ್ಘಾಟಿಸಿದರು.

ಸೋಮವಾರ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಎಐ ಚಾಲಿತ ಎಂಆರ್‌ಐ ಸೇವೆಯನ್ನು ಉದ್ಘಾಟಿಸಿ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

`ಮೈಸೂರಿನ ಮೊದಲ ಎಐ ಚಾಲಿತ ಎಂಆರ್‌ಐ ವ್ಯವಸ್ಥೆಯನ್ನು ನಮ್ಮ ಆಸ್ಪತ್ರೆ ಹೊಂದಿದAತಾಗಿದೆ. ಇದು ರೋಗ ನಿರ್ಣಯ, ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಮುನ್ನಡೆ ಸಾಧಿಸಿದಂತಾಗಿದೆ. ಸುಧಾರಿತ ವೈದ್ಯಕೀಯ ತಂತ್ರಜ್ಞಾನ ಇದಾಗಿದ್ದು, ದೊಡ್ಡ ಕನಸೊಂದು ನನಸಾಗಿದೆ' ಎಂದು ತಿಳಿಸಿದರು.

`ನಿಖರ ಮಾಹಿತಿ ಪಡೆಯಲು ಇದು ಸಹಕಾರಿ ಆಗಲಿದೆ. ಟ್ಯೂಮರ್ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಡೇಟಾ (ದತ್ತಾಂಶ) ಸಂಗ್ರಹದಲ್ಲಿ ಬಹಳ ಮಹತ್ವದ್ದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಸ್ಕಾ÷್ಯನಿಂಗ್ ಸಮಯವನ್ನೂ ತಗ್ಗಿಸುತ್ತದೆ. ವಿವಿಧ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ವಿಕಿರಣತಜ್ಞರಿಗೆ ನೆರವಾಗುವ ಬುದ್ಧಿವಂತ ಇಮೇಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಮರುಸ್ಕಾ÷್ಯನ್ ಅಗತ್ಯವನ್ನು ಕಡಿಮೆ ಮಾಡಲಿದೆ' ಎಂದು ಮಾಹಿತಿ ನೀಡಿದರು.

ಉಚಿತ ಎಂಆರ್‌ಐ: 

`ಹೊಸ ಸೇವೆಯನ್ನು ಪರಿಚಯಿಸಿದ ಅಂಗವಾಗಿ, ಧೂಮಪಾನಿಗಳಿಗೆ ಹಾಗೂ ಗುಟ್ಕಾ ಮೊದಲಾದ ಅಭ್ಯಾಸ ಇರುವವರಿಗೆ ಮುಂದಿನ ನಾಲ್ಕು ಭಾನುವಾರಗಳಂದು ಉಚಿತವಾಗಿ ಎಂಆರ್‌ಐ ಸ್ಕಾನ್ ಮತ್ತು ರಕ್ತದ ತಪಾಸಣೆಯನ್ನು ಮಾಡಲಾಗುವುದು. ಅಂಥವರಿಗೆ ಶ್ವಾಸಕೋಶದ ತೊಂದರೆ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂಬುದನ್ನು ವಿಶ್ಲೇಷಣೆ ನಡೆಸಿ ತಿಳಿದುಕೊಳ್ಳಲಾಗುವುದು. ಧೂಮಪಾನಮುಕ್ತ ಮೈಸೂರು ನಿರ್ಮಾಣಕ್ಕಾಗಿ ನಮ್ಮಿಂದ ಕೊಡುಗೆ ನೀಡುವ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ' ಎಂದು ತಿಳಿಸಿದರು.

ಬಿಎಚ್‌ಐಒ ಚೀಫ್ ರೇಡಿಯಾಲಜಿಸ್ಟ್ ಡಾ.ಅಮೋಘ್ ಕೆ.ಎಂ. ಮಾತನಾಡಿ, `ಸಾಂಪ್ರದಾಯಿಕ ಎಂಆರ್‌ಐಗಿAತ ಸುಧಾರಿತ ವ್ಯವಸ್ಥೆಯನ್ನು ಇದು ಹೊಂದಿದೆ. ಹೀಲಿಯಂ ಬಳಕೆಯ ಪ್ರಮಾಣವು ಗಣನೀಯವಾಗಿ ತಗ್ಗಲಿದೆ. ಕೇವಲ ಐದು ನಿಮಿಷದಲ್ಲಿ ಎಂಆರ್‌ಐ ಸ್ಕಾ÷್ಯನ್ ಮಾಡಬಹುದಾಗಿದೆ. ಇಮೇಜ್ ಕ್ಲಾರಿಟಿ ಬಹಳ ಚೆನ್ನಾಗಿರುತ್ತದೆ. ಶೇ 30ರಿಂದ 40ರಷ್ಟು ಇಂಧನವನ್ನು ಕಡಿಮೆ ಬಳಸುವುದರಿಂದ ಪರಿಸರ ಸ್ನೇಹಿ ವ್ಯವಸ್ಥೆಯೂ ಆಗಿದೆ. ರೋಗಿಗಳಿಗೆ ಇದರಿಂದ ಬಹಳ ಅನುಕೂಲವಾಗಲಿದೆ. ಜೊತೆಗೆ, ಹೀಲಿಯಂಗಾಗಿ ಬೇರೆ ದೇಶಗಳ ಮೇಲಿನ ಅವಲಂಬನೆ ತಗ್ಗಲಿದೆ' ಎಂದು ಹೇಳಿದರು.

ಬಿಎಚ್‌ಐಒ ನಿರ್ದೇಶಕಿ ಭಾಗ್ಯಾ ಅಜಯ್‌ಕುಮಾರ್, ಡಾ.ಅಂಜಲಿ, ಡಾ.ಮನೋಹರ್ ಪಾಲ್ಗೊಂಡಿದ್ದರು.