ಮೈಸೂರಿನ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಲೇಸರ್ ದೃಷ್ಟಿ ದೋಷ ನಿವಾರಣೆ, ಕಣ್ಣಿನ ಪೊರೆ ಚಿಕಿತ್ಸೆ

ವರದಿ : ನಿಷ್ಕಲ ಎಸ್. ಮೈಸೂರು

ಮೈಸೂರು : ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳು ಇನ್ನು ಮುಂದೆ ಅತ್ಯಾಧುನಿಕ ಲೇಸರ್ ದೃಷ್ಟಿ ದೋಷ ನಿವಾರಣೆ ಮತ್ತು ಕಣ್ಣಿನ ಪೊರೆ ಶಸ್ತçಚಿಕಿತ್ಸೆಗಾಗಿ ಬೆಂಗಳೂರಿಗೆ ಪ್ರಯಾಣಿಸಬೇಕಾಗಿಲ್ಲ. ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಸ್ವಿಟ್ಜರ್‌ಲ್ಯಾಂಡ್ ತಂತ್ರಜ್ಞಾನದ ಅತ್ಯಾಧುನಿಕ ‘ಅಐಇಂಖ SUPಖಂ' ಲೆಂಟಿಕ್ಯೂಲ್ ಎಕ್ಸ್ಟ್ರಾಕ್ಷನ್ ತಂತ್ರಜ್ಞಾನ ಹಾಗೂ ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಯನ್ನು ತನ್ನ ಮೈಸೂರು ಕೇಂದ್ರದಲ್ಲಿ ಅಧಿಕೃತವಾಗಿ ಉದ್ಘಾಟಿಸಿತು.

ಆಸ್ಪತ್ರೆಯು ಈಗಾಗಲೇ ತನ್ನ ಹಿಂದಿನ ಆವೃತ್ತಿಯ ಅಐಇಂಖ ತಂತ್ರಜ್ಞಾನದ ಮೂಲಕ ಮೈಸೂರು ಕೇಂದ್ರದಲ್ಲಿ 60ಕ್ಕೂ ಹೆಚ್ಚು ಲೇಸರ್ ದೃಷ್ಟಿ ದೋಷ ನಿವಾರಣೆ ಹಾಗೂ 90ಕ್ಕೂ ಹೆಚ್ಚು ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈಗ ‘ಅಐಇಂಖ SUPಖಂ’  ತಂತ್ರಜ್ಞಾನದ ಪರಿಚಯದೊಂದಿಗೆ, ನೇತ್ರಧಾಮವು ತನ್ನ ಸುಧಾರಿತ ಕಣ್ಣಿನ ಚಿಕಿತ್ಸಾ ಸೇವೆಯನ್ನು ಮತ್ತಷ್ಟು ಬಲಪಡಿಸಿದ್ದು, ಮೈಸೂರಿನಲ್ಲಿ ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಯ ಜೊತೆಗೆ ಈ ನೂತನ ತಂತ್ರಜ್ಞಾನವನ್ನು ನೀಡುತ್ತಿರುವ ಮೊದಲ ಕಣ್ಣಿನ ಆಸ್ಪತ್ರೆಯಾಗಿದೆ.

ಈ ವಿಸ್ತರಣೆಯು ದಕ್ಷಿಣ ಕರ್ನಾಟಕದಲ್ಲಿ ಅತ್ಯಾಧುನಿಕ ಕಣ್ಣಿನ ಚಿಕಿತ್ಸೆಯ ಲಭ್ಯತೆಯಲ್ಲಿದ್ದ ದೀರ್ಘಕಾಲದ ಕೊರತೆಯನ್ನು ನೀಗಿಸಲಿದೆ. ಈ ಸುಧಾರಿತ ತಂತ್ರಜ್ಞಾನಗಳು ಮೈಸೂರಿನಲ್ಲಿ ಲಭ್ಯವಾಗುವ ಮೊದಲು, ನೇತ್ರಧಾಮದ ಬೆಂಗಳೂರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದ ಒಟ್ಟು ರೋಗಿಗಳಲ್ಲಿ ಶೇಕಡಾ 20ರಷ್ಟು ಜನರು ಮೈಸೂರು ಮತ್ತು ಕೊಡಗು ಸೇರಿದಂತೆ ಎರಡನೇ ಹಾಗೂ ಮೂರನೇ ಹಂತದ ನಗರಗಳಿಂದ ತಲುಪುತ್ತಿದ್ದರು. ಇವರು ರಿಫ್ರಾ÷್ಯಕ್ಟಿವ್ ಶಸ್ತçಚಿಕಿತ್ಸೆ (ದೃಷ್ಟಿ ದೋಷ ನಿವಾರಣೆ), ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆ, ರೆಟಿನಾ ಚಿಕಿತ್ಸೆ ಮತ್ತು ಒಕ್ಯುಲೋಪ್ಲಾ÷್ಯಸ್ಟಿಯಂತಹ ವಿಶೇಷ ಚಿಕಿತ್ಸೆಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ತಮ್ಮ ತವರು ಪ್ರದೇಶಗಳಲ್ಲಿ ಲಭ್ಯವಿಲ್ಲದ ಈ ಅತ್ಯಾಧುನಿಕ ಕಣ್ಣಿನ ಆರೈಕೆಗಾಗಿ ಪ್ರತಿದಿನ ಸರಾಸರಿ 50ರಿಂದ 80 ರೋಗಿಗಳು ಈ ಭಾಗಗಳಿಂದ ಬೆಂಗಳೂರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು.

ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರೊ. ಡಾ. ಗಣೇಶ್ ಅವರು ಮಾತನಾಡಿ, "ಹಲವು ವರ್ಷಗಳಿಂದ ಮೈಸೂರು, ಕೊಡಗು ಮತ್ತು ಇತರ ಎರಡನೇ ಹಾಗೂ ಮೂರನೇ ಹಂತದ ನಗರಗಳ ರೋಗಿಗಳು ತಮ್ಮ ಮನೆಗಳ ಬಳಿ ಲಭ್ಯವಿಲ್ಲದ ಅತ್ಯಾಧುನಿಕ ಚಿಕಿತ್ಸೆಗಳಿಗಾಗಿ ನಮ್ಮ ಬೆಂಗಳೂರು ಕೇಂದ್ರಕ್ಕೆ ಪ್ರಯಾಣಿಸುತ್ತಿದ್ದರು. ಈಗ ‘ಅಐಇಂಖ SUPಖಂ ' ಮತ್ತು ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಯಂತಹ ತಂತ್ರಜ್ಞಾನಗಳನ್ನು ಮೈಸೂರಿಗೆ ತರುವ ಮೂಲಕ, ಅತ್ಯಂತ ನಿಖರವಾದ ಕಣ್ಣಿನ ಆರೈಕೆಯನ್ನು ಜನರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೇವೆ ಹಾಗೂ ರೋಗಿಗಳು ದೂರ ಪ್ರಯಾಣ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತಿದ್ದೇವೆ. ರೋಗಿಗಳು ಎಲ್ಲೇ ವಾಸಿಸುತ್ತಿದ್ದರೂ ಅವರಿಗೆ ಅತ್ಯುನ್ನತ ಮಟ್ಟದ ಸುರಕ್ಷತೆ, ನಿಖರತೆ ಮತ್ತು ಉತ್ತಮ ಚಿಕಿತ್ಸಾ ಫಲಿತಾಂಶಗಳನ್ನು ನೀಡುವುದೇ ನಮ್ಮ ಮುಖ್ಯ ಗುರಿಯಾಗಿದೆ. ಒಂದೆರಡು ವರ್ಷಗಳ ಹಿಂದೆ ನಾವು ಈ ಆಧುನಿಕ ತಂತ್ರಜ್ಞಾನಗಳನ್ನು ಮೈಸೂರಿನಲ್ಲಿ ಪರಿಚಯಿಸಿದಾಗಿನಿಂದ, ಬೆಂಗಳೂರಿಗೆ ಬರುವ ರೋಗಿಗಳ ಸಂಖ್ಯೆ ತಿಂಗಳಿಗೆ ಕೇವಲ 4-5ಕ್ಕೆ ಇಳಿಕೆಯಾಗಿದೆ," ಎಂದು ತಿಳಿಸಿದರು.

ಮೈಸೂರಿನ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆAಡೆAಟ್ ಹಾಗೂ ಕಾರ್ನಿಯಾ, ಕಣ್ಣಿನ ಪೊರೆ ಮತ್ತು ರಿಫ್ರಾ÷್ಯಕ್ಟಿವ್ ಸೇವೆಗಳ ಹಿರಿಯ ಸಲಹೆಗಾರರಾದ ಡಾ. ಚೇತನ್ ಆನಂದ್ ಅವರು ಮಾತನಾಡಿ , "ಸುಧಾರಿತ ರಿಫ್ರಾ÷್ಯಕ್ಟಿವ್ ಶಸ್ತçಚಿಕಿತ್ಸೆ ಮತ್ತು ಲೇಸರ್ ಆಧಾರಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗಳು ಸಾಮಾನ್ಯವಾಗಿ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿದ್ದವು. ಇದರಿಂದಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅನೇಕ ರೋಗಿಗಳು ಚಿಕಿತ್ಸೆಗಾಗಿ ಪ್ರಯಾಣಿಸಬೇಕಾಗಿತ್ತು. ಆದರೆ ಈಗ ಈ ತಂತ್ರಜ್ಞಾನಗಳು ಸ್ಥಳೀಯವಾಗಿಯೇ ಲಭ್ಯವಿರುವುದರಿಂದ, ರೋಗಿಗಳು ತಮ್ಮ ಪ್ರದೇಶವನ್ನು ಬಿಟ್ಟು ದೂರ ಹೋಗದೆ ಅತ್ಯಂತ ನಿಖರ ಶಸ್ತçಚಿಕಿತ್ಸೆ, ಶೀಘ್ರ ದೃಷ್ಟಿ ಚೇತರಿಕೆ ಮತ್ತು ಅತ್ಯುತ್ತಮ ಚಿಕಿತ್ಸಾ ಅನುಭವದ ಪ್ರಯೋಜನವನ್ನು ಪಡೆಯಬಹುದು," ಎಂದು ಹೇಳಿದರು.

ಮೈಸೂರಿನ ಈ ಕೇಂದ್ರವು ಎರಡು ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು ಹತ್ತು ಸ್ಪೆಷಾಲಿಟಿ ಸಲಹಾ ಚಿಕಿತ್ಸಾಲಯಗಳನ್ನು ಹೊಂದಿದ್ದು, ಕಣ್ಣಿನ ಪೊರೆ, ರಿಫ್ರಾ÷್ಯಕ್ಟಿವ್ ಶಸ್ತçಚಿಕಿತ್ಸೆ, ಕಾರ್ನಿಯಾ, ರೆಟಿನಾ, ಗ್ಲಾಕೋಮಾ  ಮತ್ತು ಒಕ್ಯುಲೋಪ್ಲಾ÷್ಯಸ್ಟಿಯಂತಹ ಸಮಗ್ರ ಕಣ್ಣಿನ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಅಲ್ಲದೆ, ಇದು ಮೈಸೂರಿನ ಮೊದಲ ಓಂಃಊ ಮಾನ್ಯತೆ ಪಡೆದ ಕಣ್ಣಿನ ಆಸ್ಪತ್ರೆಯಾಗಿದ್ದು, ಗುಣಮಟ್ಟ, ರೋಗಿಗಳ ಸುರಕ್ಷತೆ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆಗೆ ನೇತ್ರಧಾಮ ನೀಡುವ ಆದ್ಯತೆಯನ್ನು ಬಿಂಬಿಸುತ್ತದೆ.

"ವೈದ್ಯರ ಒಡೆತನದ ಮತ್ತು ವೈದ್ಯರ ನಾಯಕತ್ವದ ಸಂಸ್ಥೆಯಾಗಿ, ನಾವು ಮಾಡುವ ಪ್ರತಿಯೊಂದು ತಂತ್ರಜ್ಞಾನದ ಹೂಡಿಕೆಯು ಒಂದೇ ಒಂದು ಉದ್ದೇಶದಿಂದ ಪ್ರೇರಿತವಾಗಿದೆ, ಅದೇನೆಂದರೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಾ ಫಲಿತಾಂಶವನ್ನು ನೀಡುವುದು. ಯಾವುದೇ ಹೊಸ ತಂತ್ರಜ್ಞಾನವನ್ನು ನಮ್ಮ ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳುವ ಮೊದಲು, ಅದು ನೀಡುವ ಸುರಕ್ಷತೆ, ನಿಖರತೆ ಮತ್ತು ಸುದೀರ್ಘ ದೃಷ್ಟಿ ಸುಧಾರಣೆಯಂತಹ ವೈದ್ಯಕೀಯ ಪ್ರಯೋಜನಗಳ ಆಧಾರದ ಮೇಲೆ ನಾವು ಅದನ್ನು ಮೌಲ್ಯಮಾಪನ ಮಾಡುತ್ತೇವೆ. ಮೆಟ್ರೋಪಾಲಿಟನ್ ದೊಡ್ಡ ನಗರಗಳನ್ನು ಹೊರತುಪಡಿಸಿ, ಕಣ್ಣಿನ ಆರೈಕೆಯಲ್ಲಿನ ಆಧುನಿಕ ತಂತ್ರಜ್ಞಾನಗಳು ಎಲ್ಲರಿಗೂ ಸಿಗುವಂತೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಚೇತನ್ ಇದ್ದರು.