ಮೈಸೂರು : ನಗರದ ವಿದ್ಯಾರಣ್ಯಪುರಂನಲ್ಲಿರುವ ರಾಜೇಶ್ ಎಸ್.ಕಶ್ಯಪ್ ಮತ್ತು ಅರ್ಚನ ಕುಟುಂಬದವರ ನಿವಾಸದಲ್ಲಿ 355ನೇ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿAದ ನಡೆಯಿತು.
ಸಾವಿರಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು. ಈ ಸಂದರ್ಭದಲ್ಲಿ ರಾಜೇಶ್ ಎಸ್.ಕಶ್ಯಪ್ ಅವರು ಮಾತನಾಡಿ, ಕಳೆದ 25 ವರ್ಷಗಳಿಂದ ತಮ್ಮ ನಿವಾಸದಲ್ಲಿ ಶ್ರೀ ಗುರುರಾಯರ ಆರಾಧನಾ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದು, 25ನೇ ವರ್ಷದ ಸವಿನೆನಪಿಗಾಗಿ ಸೆ.2 ರಂದು ಬುಧವಾರ ಸಂಜೆ 5 ಗಂಟೆಯಿAದ ರಾತ್ರಿ 8 ಗಂಟೆತನಕ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ಸವವನ್ನು ಏರ್ಪಡಿಸಲಾಗಿದೆ, ಗುರುರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಕೋರಿದರು.
ಗುರುರಾಯರು ಅತ್ಯಂತ ದಯಾಳುವಾಗಿದ್ದು, ಭಕ್ತರು ಕೋರುವ ಸಕಲವನ್ನೂ ದಯಪಾಲಿಸುತ್ತಾರೆ. ಅವರನ್ನು ಕೇಳುವ ವಿಧಾನ ಸಮರ್ಪಕವಾಗಿರಬೇಕು ಎಂದರು. ಇದೇ ಸಂದರ್ಭದಲ್ಲಿ ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಗಣ್ಯರು ಭಾಗವಹಿಸಿದ್ದರು.


