ಮೈಸೂರು : ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಕ್ತಿನಗರ ಹೆಚ್‌ಪಿಆರ್‌ಎಂಎಸ್ ಲೇಔಟ್ ಮತ್ತು ಕೆ.ಎನ್.ಪುರ ಬಡಾವಣೆಯ ಮಾನಸಾ ಶಾಲೆ ಸಮೀಪ ಯುಜಿಡಿ ಕಾಮಗಾರಿಗಳಿಗೆ ಶಾಸಕ ತನ್ವೀರ್ ಸೇಠ್ ಅವರು ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರಸ್ತುತ ಮಹಾತ್ಮಾಗಾಂಧಿ ನಗರ ಪುನಶ್ಚೇತನ ಯೋಜನೆಯಡಿ 13.5 ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ಬಂದಿತ್ತು, ಅದರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಳಾಗಿದ್ದ ಕಾರಣ, ಮುಖ್ಯಮಂತ್ರಿಗಳ ವಿಶೇಷ 5.25 ಕೋಟಿ ಅನುದಾನದಲ್ಲಿ ಶಕ್ತಿನಗರ, ಗಾಂಧಿನಗರ, ಮೊಹಮ್ಮದ್ ಸೇಠ್ ಬ್ಲಾಕ್, ಸಿವಿ ರಸ್ತೆ ಮತ್ತು ಮಾನಸಿ ಶಾಲೆ ಹತ್ತಿರ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯಿಂದ ನನ್ನ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಮೈಸೂರು ನಗರದಲ್ಲಿ ವಿದ್ಯುತ್‌ಚ್ಛಕ್ತಿ, ಗ್ಯಾಸ್ ಪೈಪ್‌ಲೈನ್ ಮತ್ತು ಟೆಲಿಫೋನ್ ಕೇಬಲ್ ಭೂಮಿಯಲ್ಲಿ ಅಳವಡಿಕೆ ಕೆಲಸವೂ ನಡೆಯುತ್ತಿದೆ. ಇದರಿಂದ ಬಹುತೇಕ ನಗರದ ಎಲ್ಲ ರಸ್ತೆಗಳೂ ಹಾಳಾಗಿದ್ದು, ಈ ಸಂಬAಧ ಶಾಸಕರ ಅನುದಾನ, ನಗರಪಾಲಿಕೆ ಅನುದಾನ ಪಡೆದು ರಸ್ತೆ ಕಾಮಗಾರಿ ನಡೆಸಲಾಗುವುದು. ಒಟ್ಟಾರೆ ನನ್ನ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿವೆ. ಪ್ರಮುಖವಾಗಿ ಅಗತ್ಯವಿರುವ ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತುಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಚೌಡಯ್ಯ, ಶ್ರೀನಿವಾಸ್, ಮಹಮ್ಮದ್ ಪಾಷ, ಯುವ ಕಾಂಗ್ರೆಸ್ ಮುಖಂಡ ಅದ್ನಾನ್, ರಾಜೇಶ್, ಜಗದೀಶ್, ಹೇಮಂತ್ ಇತರರು ಇದ್ದರು.
ಹೈಕಮಾಂಡ್ ಗೊಂದಲ ಬಗೆಹರಿಸಲಿ:
ಅಧಿಕಾರ ಹಸ್ತಾಂತರ ಗೊಂದಲ ವಿಚಾರ ಬೀದಿಯಲ್ಲಿ ಚರ್ಚೆಯಾಗುತ್ತಿದ್ದು, ಈಗ ಎಲ್ಲಾ ಚುನಾವನೆಗಳು ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಗೊಂದಲ ಬಗೆಹರಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದರು.
ಮೈಸೂರಿನಲ್ಲಿ ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಯಿಸಿದ ಅವರು, ನಾನು ಅಧಿಕಾರ ಕೇಳಿಕೊಂಡು ದೆಹಲಿಗೆ ಹೋಗುವುದಿಲ್ಲ. ಅವಕಾಶ ಕೊಟ್ಟರೆ ಆಡಳಿತ ನಡೆಸಿ ತೋರಿಸುತ್ತೇನೆ. ಸಂಪುಟ ಪುನಾರಚನೆಯೋ ಸಂಪುಟ ವಿಸ್ತರಣೆಯೋ ಅಧಿಕಾರ ಹಂಚಿಕೆಯೋ ಏನಾಗುತ್ತೊ ಯಾರಿಗೆ ಗೊತ್ತು?,
ಆದರೆ ಏನಾದ್ರು ಒಂದು ಆಗಬೇಕು. ಪಕ್ಷದ ವಿಚಾರ ಈಗ ಬೀದಿ ಜಗಳವಾಗಿದೆ. ಇದು ಮೊದಲು ನಿಲ್ಲಬೇಕು. ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಇದನ್ನ ಹೈಕಮಾಂಡ್ ಮೊದಲು ತಪ್ಪಿಸಬೇಕಿದೆ. ಈಗ ಕೇರಳ ವಿಚಾರವೂ ಮುಗಿದಿದೆ. ಹೈಕಮಾಂಡ್ ಈಗಲಾದರೂ ನಮ್ಮ ಮೇಲೆ ದೃಷ್ಟಿ ಬೀರಲಿ. ನಮ್ಮ ವಿಚಾರಗಳನ್ನ ಗಮನ ಹರಿಸಲಿ ಎಂದರು.
ಪಂಚ ರಾಜ್ಯ ಚುನಾವಣೆ ಆಯಿತು. ಈಗ ಬೇರೆ ಯಾವ ರಾಜಕೀಯ ಬೆಳವಣಿಗೆಗಳು ಎಲ್ಲೂ ಇಲ್ಲ. ಈಗ ಕರ್ನಾಟಕದ ವಿಚಾರವನ್ನು ಹೈ ಕಮಾಂಡ್ ಕೈಗೆತ್ತಿಕೊಳ್ಳಬೇಕು. ಎರಡುವರೆ ವರ್ಷಕ್ಕೆ ಸಂಪುಟ ಪುನಾರಚನೆಯಾಗಬೇಕಿತ್ತು. ಈಗ ಮೂರು ವರ್ಷ ಮುಗಿದಿದೆ. ಅಧಿಕಾರ ಹಸ್ತಾಂತರ ವಿಚಾರ ನಮ್ಮ ಮುಂದೆ ಚರ್ಚೆ ನಡೆದಿಲ್ಲ
ಆ ಚರ್ಚೆ ಏನೂ ಎಲ್ಲವನ್ನೂ ಈಗಲಾದರೂ ಹೈ ಕಮಾಂಡ್ ಹೇಳಲಿ. ನಾವು ಹೈಕಮಾಂಡ್ ನಷ್ಟೇ ನಂಬಿದ್ದೇವೆ. ಗಂಡ ಆಗುತ್ತೊ ಹೆಣ್ಣಾಗುತ್ತೊ ನನಗೆ ಗೊತ್ತಿಲ್ಲ. ಏನಾದರೂ ಮೊದಲು ಆಗಲಿ, ಆದ ಮೇಲೆ ಹೆಸರು ಇಡೋಣಾ ಒಟ್ಟು ಏನಾದರು ಒಂದು ಆಗಬೇಕಿದೆ ಎಂದರು.


