ಪಾಂಡವಪುರ : ತಾಲ್ಲೂಕಿನ ರಾಗಿಮುದ್ದನಹಳ್ಳಿ ಮತ್ತು ಹೆಳವರಕೊಪ್ಪಲು ಗ್ರಾಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮಂಗಳವಾರ 1.75 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
ಬಳಿಕ ಅವರು ಮಾತನಾಡಿ, 1.05 ಕೋಟಿ ರೂ. ವೆಚ್ಚದ ರಾಗಿಮುದ್ದನಹಳ್ಳಿ ಡಿಂಕಾ ಮುಖ್ಯ ರಸ್ತೆ ಕಾಮಗಾರಿ ಪೂಜೆ ಸಲ್ಲಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಕೊಟ್ಟ ಮಾತಿನಂತೆ ಗುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೂ 7.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದ್ದೇವೆ. ಉಳಿದಂತೆ ಇನ್ನೂ ಹೆಚ್ಚಿನ ಅನುದಾನ ತಂದು ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರ ಎಲ್ಲ ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.
ಹೆಳವರಕೊಪ್ಪಲು ಒಂದು ಕುಗ್ರಾಮವಾಗಿದೆ. ಸುಮಾರು 25 ಮನೆಗಲು ಇದ್ದು, ಇದುವರೆಗೂ ಇಲ್ಲಿ ರಸ್ತೆ ಅಭಿವೃದ್ಧಿ ಆಗಿರಲಿಲ್ಲ, ಇದೀಗ ಗ್ರಾಮದ ಮುಖ್ಯರಸ್ತೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಈ ಕಾಮಗಾರಿಯು 70 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷರಾದ ದಯಾನಂದ, ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ವೈ.ಪಿ.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷರಾದ ರೂಪ, ಮುಖಂಡರಾದ ರಘು, ರಾಗಿಮುದ್ದನಹಳ್ಳಿ ಗ್ರಾಮದ ಮುಖಂಡರಾದ ರಾ.ಸ.ಹನುಮಂತೇಗೌಡ, ಪ್ರಕಾಶ್, ಮಹೇಶ್, ಶಾಮು, ಮಂಜು, ಆರ್. ಬಿ. ಜಗದೀಶ್, ಆರ್.ವಿ. ಜಗದೀಶ್, ಗ್ರಾಮದ ಯಜಮಾನರಾದ ನಾಗರಾಜು, ಜಯರಾಮ, ರಘು ಕುಮಾರ, ಸೋಮ, ಕುಮಾರ, ಹೆಳವರಕೊಪ್ಪಲು ಗ್ರಾಮದ ಸೋಮ, ವಿಜಯ್, ಬಸವಣ್ಣ, ಮಧು, ನಾಗರಾಜು, ಗಾಡಿ ಮಸ್ಸಿ ಅಣ್ಣ, ಎಚ್.ಎಮ್. ರವಿ, ಮಂಜುನಾಥ, ಪ್ರಕಾಶ್, ಮಹೇಶ್, ರವಿಚಂದ್ರನ್ ಮತ್ತು ಅಕ್ಕಪಕ್ಕದ ಗ್ರಾಮಸ್ಥರು, ರೈತಸಂಘ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.
ಹೆಳವರಕೊಪ್ಪಲು ಗ್ರಾಮದಲ್ಲಿ ಅದ್ದೂರಿ ಸ್ವಾಗತ
ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗ್ರಾಮಕ್ಕೆ ಆಗಮಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಹೆಳವರಕೊಪ್ಪಲು ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಕಳಶ ಹೊತ್ತ ಮಹಿಳೆಯರು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಹಾಜರಿದ್ದ ವೃದ್ಧ ಮಹಿಳೆರಿಗೆ ದರ್ಶನ್ ಪುಟ್ಟಣ್ಣಯ್ಯ ನಮಸ್ಕರಿಸಿ ಆಶೀರ್ವಾದ ಪಡೆದರು.


