ಶಾಸಕ ತನ್ವೀರ್ ಸೇಠ್ ಅವರನ್ನು ಅಭಿನಂದಿಸಿದ ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಕಮ್ರಾನ್ ಪಾಷ


 ಮೈಸೂರು: ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಹಾಗೂ ಮಾಜಿ ಸಚಿವರಾದ ತನ್ವೀರ್ ಸೇಠ್ ಅವರಿಗೆ ಸಾಹುಕಾರ್ ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಕಮ್ರಾನ್ ಪಾಷ ಅವರು ಸನ್ಮಾನಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಶನಿವಾರ ಉದಯಗಿರಿ ಬಡಾವಣೆಯಲ್ಲಿರುವ ಶಾಸಕರಾದ ತನ್ವೀರ್ ಸೇಠ್ ಅವರ ನಿವಾಸದ ಎದುರು ನಡೆದ ಸಮಾರಂಭದಲ್ಲಿ ಕಮ್ರಾನ್ ಪಾಷ ತಮ್ಮ ಗೆಳೆಯರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜತೆಗೂಡಿ ಶಾಸಕರಾದ ತನ್ವೀರ್ ಸೇಠ್ ಅವರಿಗೆ ಶಾಲು, ಹಾರ ಮೈಸೂರು ಪೇಟ ತೊಡಿಸಿ, ಕೇಕ್ ಕತ್ತರಿಸುವ ಮೂಲಕ ತನ್ವೀರ್ ಸೇಠ್ ಅವರ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರು ಒಬ್ಬ ಜನಪರ ನಾಯಕರು, ಅಭಿವೃದ್ಧಿಯ ಹರಿಕಾರರೂ ಆಗಿದ್ದಾರೆ. ಅವರನ್ನು ಎಲ್ಲ ಸಮುದಾಯದ ಜನರು ಗೌರವಿಸಿ ಪ್ರೀತಿ ತೋರುತ್ತಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ಸಾವಿರಾರು ಜನರು ಯಾವುದೇ ಪಕ್ಷಬೇಧ ಮರೆತು, ಜಾತಿ ಬೇಧ ಮರೆತು ಆಗಮಿಸಿ ತನ್ವೀರ್ ಸೇಠ್ ಅವರಿಗೆ ಗೌರವಿಸಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇದು ತನ್ವೀರ್ ಸೇಠ್ ಅವರ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂದೆ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಅವರು ಈ ರಾಜ್ಯಕ್ಕೆ ಉಪ ಮುಖ್ಯಮಂತ್ರಿಗಳಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.