ಕೋಮು ಸೌಹಾರ್ದತೆ ಕೆಡಿಸುತ್ತಿರುವವರ ವಿರುದ್ಧ ರಾಜ್ಯ ಸರ್ಕಾರದ ಮೃದು ಧೋರಣೆಗೆ ಎಸ್‌ಡಿಪಿಐ ಕಿಡಿ : ಕೋಮು ಪ್ರಚೋದನೆ ನಡೆಸುತ್ತಿರುವ ಪ್ರತಾಪ್ ಸಿಂಹ ಗಡಿಪಾರು ಮಾಡುವಂತೆ ಎಸ್‌ಡಿಪಿಐ ಆಗ್ರಹ


 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸುವುದು ಮತ್ತು ಅದಕ್ಕೆ ಕೋಮು ಬಣ್ಣ ಕಟ್ಟುವುವುದೇ ಕೆಲವು ಬಿಜೆಪಿ ಮುಖಂಡರ ಕೆಲಸವಾಗಿದ್ದು, ಕೋತಿ ತಾನು ಕೆಡುವುದಲ್ಲದೇ ಇಡೀ ವನವನ್ನು ಕೆಡಿಸಿದಂತಿದೆ ಈ ಪ್ರತಾಪ್ ಸಿಂಹನ ವರ್ತನೆ ಎಂದು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಕಿಡಿ ಕಾರಿದ್ದಾರೆ.

ಮೈಸೂರು ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಆರ್.ಅಶೋಕ್, ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಯತ್ನಾಳ್ ಮದ್ದೂರಿಗೆ ಬಂದು ಕೋಮು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಅಶಾಂತಿ ಸೃಷ್ಟಿಗೆ ಕಾರಣರಾಗಿದ್ದಾರೆ. ಇದೇ ಕೆಲಸವನ್ನು ಯಾರಾದರೂ ಒಬ್ಬ ಮುಸ್ಲಿಂ ವ್ಯಕ್ತಿ ಮಾತನಾಡಿದ್ದರೆ ತಕ್ಷಣ ಕ್ರಮ ಕೈಗೊಳ್ಳುತ್ತಿದ್ದ ರಾಜ್ಯ ಸರ್ಕಾರ, ಬಿಜೆಪಿ ಮುಖಂಡರ ವಿರುದ್ಧ ಮೌನ ಮತ್ತು ಮೃದು ಧೋರಣೆ ತಾಳಿದೆ, ಕೇವಲ ಒಂದು ದೂರು ದಾಖಲಿಸುವುದು ಸಾಕೇ.. ಕೂಡಲೇ ಪ್ರತಾಪ್ ಸಿಂಹ ಮತ್ತಿತರ ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ದ ಗಡಿಪಾರು ಕ್ರಮ ಕೈಗೊಳ್ಳಬೇಕೆಂದು ರಫತ್ ಖಾನ್ ಆಗ್ರಹಿಸಿದರು.

ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಕಲ್ಲುಗಳು ಮಸೀದಿಯಿಂದ ಬಂದಿಲ್ಲ, ದೂರದಿಂದ ಬಂದಿವೆ ಎಂದು ಐಜಿಪಿ ಅವರೇ ಹೇಳಿದ್ದಾರೆ. ಆದಾಗ್ಯೂ 21 ಜನ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಕೂಡಲೇ ಪೊಲೀಸರು ಸೂಕ್ತ ವಿಚಾರಣೆ ನಡೆಸಿ, ಯುವಕರು ತಪ್ಪು ಮಾಡಿಲ್ಲ ಎನ್ನುವುದಾದರೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹತ್ತಾರು ವರ್ಷಗಳ ಹಿಂದೆಯೇ ರಾಷ್ಟçಕವಿ ಕುವೆಂಪು ಅವರು ಹೇಳಿದ್ದಾರೆ. ನಾಡಿನ ಜನತೆಯೂ ಸರ್ವ ಧರ್ಮಿಯರ ಜತೆ ಸಾಹಾರ್ದತೆಯಿಂದ ಇದ್ದಾರೆ. ಕೇವಲ ರಾಜಕೀಯ ಕಾರಣಕ್ಕಾಗಿ ಪ್ರತಾಪ್ ಸಿಂಹ, ಸಿ.ಟಿ.ರವಿ, ಯತ್ನಾಳ್, ಪ್ರಮೋದ್ ಮುತಾಲಿಕ್ ಅವರಂತಹ ವಿಷಯ ಜಂತುಗಳು ಕೋಮು ಗಲಭೆ ಸೃಷ್ಟಿಸಿ, ರಾಜ್ಯದ ಸೌಹಾರ್ದತೆ ಕೆಡಿಸುತ್ತಿದ್ದಾರೆ. ಸಿ.ಟಿ.ರವಿ ಮುಸ್ಲೀಮರ ತಲೆ ಕಡಿಯುತ್ತೇವೆ ಎನ್ನುತ್ತಾರೆ, ಯತ್ನಾಳ್ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳಿಸುತ್ತೇವೆ ಎನ್ನುತ್ತಾರೆ. ಸೆಕ್ಯೂಲರ್ ದೊರೆಯಾದ ಶಿವಾಜಿ ಮಹಾರಾಜರ ಹೆಸರು ಹೇಳಿಕೊಂಡು ಪ್ರತಾಪ್ ಸಿಂಹ ಮುಸಲ್ಮಾನರ ವಿರುದ್ಧ ಪ್ರಚೋದನೆ ನೀಡುತ್ತಿದ್ದಾರೆ. ರಾಣಾ ಪ್ರತಾಪ್ ಸಿಂಹ ಮತ್ತು ಶಿವಾಜಿ ಮಹಾರಾಜರ ಹೆಸರು ಹೇಳಲು ಕೂಡ ಪ್ರತಾಪ್ ಸಿಂಹನಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಅಲ್ಲದೇ ಪದೇ ಪದೇ ಕೋಮು ಪ್ರಚೋದನೆ ನೀಡುತ್ತಿರುವ ಪ್ರತಾಪ್ ಸಿಂಹ, ಸಿ.ಟಿ.ರವಿ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಬೇಕು. ಜತೆಗೆ ಪ್ರತಾಪ್ ಸಿಂಹ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದಲ್ಲಿ ಎಸ್‌ಡಿಪಿಐ, ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಫರ್ದಿನ್ ಅಹಮದ್ ಇದ್ದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು