ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ವೇದಿಕೆಯ ರೂಪುರೇಷೆಗಳ ಬಗ್ಗೆ ಭಾನುವಾರ ಮೈಸೂರಿನಲ್ಲಿ ವಿವಿಧ ಸಮುದಾಗಳ ಪ್ರಮುಖ ಮುಖಂಡರು ಚರ್ಚೆ ನಡೆಸಿದರು.
ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ್ ಅವರು ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಉಪ್ಪಾರ ಸಮುದಾಯದ ರಾಜ್ಯ ನಾಯಕರು, ಹಿರಿಯ ಹೋರಾಟಗಾರರೂ ಆದ ಜಿ.ಎಂ.ಗಾಡ್ಕರ್, ವರುಣಾ ಕ್ಷೇತ್ರದ ಮುಖಂಡರು ಮತ್ತು ಹೋರಾಟಗಾರರಾದ ಜಯರಾಜ್ ಹೆಗ್ಗಡೆ, ಚಾಮುಂಡೇಶ್ವರಿ ಕ್ಷೇತ್ರದ ದಲಿತ ಹೋರಾಟಗಾರರಾದ ಜಿ.ಎಂ.ಅAದಾನಿ, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ. ಕಾಟೂರು, ವರುಣಾ ಕ್ಷೇತ್ರದ ದಲಿತ ಮುಖಂಡರಾದ ಹೊಸಕೋಟೆ ಕುಮಾರ್, ದಲಿತ ಮುಖಂಡರಾದ ನಾಡನಹಳ್ಳಿ ಸಣ್ಣಯ್ಯನವರ ಮಗ ಚಂದ್ರು, ಮೈಸೂರು ಜಿಲ್ಲಾ ವೀರ ಮಡಿವಾಳ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ್ ಒಟ್ಟಾಗಿ ಸೇರಿ ನಡೆಸಿದ ಈ ಪೂರ್ವಭಾವಿ ಸಭೆಯಲ್ಲಿ, ತುಳಿತಕ್ಕೆ ಒಳಗಾದ ಮತ್ತು ದನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ದೊರಕಿಸಿಕೊಡುವ ಬಗ್ಗೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಚರ್ಚೆ ನಡೆಸಿದರು.
ದಮನಿತ ಸಮಾಜಗಳ ಪರವಾಗಿ ಹೋರಾಟ ನಡೆಸುತ್ತಿರುವ ರಾಜ್ಯ ಉಪ್ಪಾರ ಸಂಘದ ಪ್ರಮುಖ ನಾಯಕರಾದ ಜಿ.ಎಂ.ಗಾಡ್ಕರ್ ಅವರು ಮಾತನಾಡಿ, ತಮ್ಮ ವಿದ್ಯಾರ್ಥಿ ದೆಸೆಯ ಮತ್ತು ಇತ್ತೀಚಿನ ಹೋರಾಟದ ದಿನಗಳ ಬಗ್ಗೆ ಮೆಲುಕು ಹಾಕಿ, ಪ್ರಸ್ತುತ ದಮನಿತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ತುಂಬಲು ಕೈಗೊಳ್ಳಬೇಕಾದ ಸಂಘಟನಾತ್ಮಕ ಹೋರಾಟಗಳ ಬಗ್ಗೆ ಚರ್ಚೆ ನಡೆಸಿದರು. ಮತ್ತು ಹಾಜರಿದ್ದ ಇತರೆ ಮುಖಂಡರ ಅಭಿಪ್ರಾಯಗಳನ್ನು ಸಹ ಆಲಿಸಿದರು.
ಬಳಿಕ ಅವರು ಮಾತನಾಡಿ, ಇತ್ತಿಚಿನ ದಿನಮಾನಗಳಲ್ಲಿ ದಮನಿತ ಸಮುದಾಯಗಳ ಹೋರಾಟಗಳು ಕ್ಷಿಣಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಜಿ.ಎಂ.ಗಾಡ್ಕರ್ ಅವರು, ಸಂವಿಧಾನದ ಬದ್ಧವಾಗಿ ಎಸ್.ಸಿ/ಎಸ್.ಟಿ ಮತ್ತು ಅಹಿಂದ ವರ್ಗಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ, ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿ.ಎಂ.ಗಾಡ್ಕರ್ ಹೇಳಿದರಲ್ಲದೇ, ಇದಕ್ಕೆ ಪರಿಹರ ಕುರಿತು ಹಾಜರಿದ್ದ ವಿವಿಧ ಸಮುದಾಯದ ಮುಖಂಡರ ಜತೆ ಸುದೀರ್ಘವಾಗಿ ಚರ್ಚಿಸಿದರು.
ಹಿಂದಿನ ಹೋರಾಟಗಳಂತೆ ಸಂಘಟನಾತ್ಮಕವಾಗಿ ಹೋರಾಟ ನಡೆಸಿದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ದಮನಿತ ಸಮಾಜಗಳ ಸಮಾನ ಮನಸ್ಕ ಮುಖಂಡರು ಒಟ್ಟಾಗಿ ಒಂದೇ ವೆದಿಕೆಗೆ ಬಂದು ಹೋರಾಟ ನಡೆಸಬೇಕು. ಇದಕ್ಕೆ ಪೂರಕವಾಗಿ ಮೊದಲು ಹೋರಾಟದ ರೂಪುರೇಷೆಗಳನ್ನು ರೂಪಿಸಿಕೊಳ್ಳಬೇಕು. ದಮನಿತ ಸಮಾಜಗಳ ಮೇಲೆ ಆಗುತ್ತಿರುವ ನಿರಂತರ ಅನ್ಯಾಯಗಳನ್ನು ತಡೆಯುವ ನಿಟ್ಟಿನಲ್ಲಿ ಏನೇ ಸಮಸ್ಯೆಗಳು ಎದುರಾದರೂ ನಾವುಗಳು ಒಗ್ಗಟ್ಟಾಗಿ ಹೋರಾಟ ಮಾಡುವ ನಿಲುವುಗಳನ್ನು ತೆಗೆದುಕೊಳ್ಳೋಣ ಹೋರಾಟಗಾರರಾದ ವರುಣಾ ಮಹೇಶ್, ಎಂ.ಕೆ.ಅಶೋಕ ಅವರು ಸಹ ಈ ಸಭೆಗೆ ಬರಬೇಕಿತ್ತು, ಕಾರಣಂತರಿAದ ಬಂದಿಲ್ಲ, ವಿದ್ಯಾರ್ಥಿ ದೆಸೆಯಿಂದಲೂ ಅವರು ನಮ್ಮ ಜತೆ ಹೋರಾಟದಲ್ಲಿ ಇದ್ದರು ಎಂದರು.
ಈ ಹಿಂದೆ ಮಾಡುತ್ತಿದ್ದ ಸಂಘಟನಾತ್ಮಕ ಹೋರಾಟಗಳು ಮರುಕಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ನಮ್ಮ ದಮನಿತ ಸಮಾಜಗಳ ರಕ್ಷಣೆಯನ್ನು ಮಾಡೋಣ, ಅದಕ್ಕೆ ಎಲ್ಲರೂ ಜತೆಗೂಡಿ ಸಂಕಲ್ಪ ಮಾಡೋಣ ಎಂದು ವಿವಿಧ ಸಮುದಾಗಳ ಮುಖಂಡರು ಒಕ್ಕೊರಲಿನಿಂದ ನಿರ್ಧಾರ ಮಾಡಿದರು.
ವೇದಿಕೆಯು ಮೈಸೂರು ಮತ್ತು ಚಾಮರಾಜನಗರದಿಂದ ಪ್ರಾರಂಭವಾಗಿ, ಮೈಸೂರು ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಸಂಘಟನೆ ಮಾಡಿ ನಂತರ ಬೆಂಗಳೂರು ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಸಂಘಟನೆ ಮಾಡಲು ಚರ್ಚೆ ಮಾಡಲಾಯಿತು. ಬಳಿಕ ಕಲಬುರ್ಗಿ ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಸಂಘಟನೆ ಮುಗಿಸಿ, ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳಲ್ಲಿ ಸಂಘಟನೆ ಮಾಡಲು ನಿರ್ಧಾರ ಮಾಡಲಾಯಿತು. ಈ ಬಗ್ಗೆ ಕಾರ್ಯಕ್ರಮ ರೂಪಿಸಲು ಸೆ. 17 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಮೈಸೂರಿನಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ ಎಂದು ಜಿ.ಎಂ.ಗಾಡ್ಕರ್ ವಿವರಣೆ ನೀಡಿದರು.
0 ಕಾಮೆಂಟ್‌ಗಳು