ವರದಿ: ನಜೀರ್ ಅಹಮದ್, ಮೈಸೂರು
ಮೈಸೂರು : ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ನ್ಯಾಯಾಲಯದ ಮೊರೆ ಹೋಗಿದ್ದ ಸಂದರ್ಭದಲ್ಲೇ ಈ ಕೇಸು ಬಿದ್ದು ಹೋಗುತ್ತೆ, ಪಿಐಎಲ್ ವಜಾ ಆಗುತ್ತೆ ಎಂದು ಗೊತ್ತಿತ್ತು, ಇದು ನಮ್ಮ ಸಂವಿಧಾನಕ್ಕೆ ಸಿಕ್ಕ ಜಯ ಮತ್ತು ನಾಡಹಬ್ಬಕ್ಕೆ ಸಿಕ್ಕ ಜಯ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ರೇಹಾನ್ ಬೇಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಮಗೆ ಕೋರ್ಟ್ ಮೇಲೆ ನಂಬಿಕೆ ಇತ್ತು, ಪ್ರತಾಪ್ ಸಿಂಹ ನಡೆ ಅಸಾಂವಿಧಾನಿಕವಾಗಿತ್ತು, ಅವರ ಅರ್ಜಿಯನ್ನು ವಜಾ ಮಾಡುವ ಮೂಲಕ ಕೋರ್ಟ್ ಛೀಮಾರಿ ಹಾಕಿದೆ. ದ್ವೇಷ ರಾಜಕಾರಣಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲ, ಈ ಹಿಂದೆಯೂ ಕೇಂದ್ರ ಗೃಹಮಂತ್ರಿ ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ವ್ಯಂಗ್ಯವಾಡಿದ್ದರು, ಬಿಜೆಪಿಯವರ ಮನಸ್ಥಿತಿಯೇ ಇದೇ ರೀತಿಯಾಗಿದೆ. ಅವರು ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನ ಬದಲಿಸುವ ಪಿತೂರಿ ನಡೆಸಿದ್ದರು, ಆದರೇ, ಸೂರ್ಯ, ಚಂದ್ರ ಇರುವವರೆಗೂ ನಮ್ಮ ಸಂವಿಧಾನ ಭದ್ರವಾಗಿರುತ್ತದೆ.
ಪ್ರತಾಪ್ ಸಿಂಹನ ಸೋಲು ಸತ್ಯದ ಗೆಲವು ಎಂದು ರೇಹಾನ್ ಬೇಗ್ ಹೇಳಿದ್ದಾರೆ.