ವರದಿ : ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು : ನಗರದ ಬಹುತೇಕ ಕಾರ್ಖಾನೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಕೇವಲ ತೋರಿಕೆಗಾಗಿ ಬಳಕೆ ಮಾಡುತ್ತಿದ್ದು, ಕನ್ನಡ ಭಾಷೆಯ ಕಡೆಗಣನೆಯನ್ನು ನಾವು ಸಹಿಸುವುದಿಲ್ಲ, ಪ್ರತಿಯೊಂದು ಕೈಗಾರಿಕೆಗಳು ತಮ್ಮ ನಾಮಫಲಕಗಳಲ್ಲಿ ಶೇ.60ಕ್ಕಿಂತಲೂ ಅಧಿಕ ಸ್ಥಳದಲ್ಲಿ ಕನ್ನಡ ಭಾಷೆಯ ಬಳಕೆ ಮಾಡಬೇಕು. ಇದಕ್ಕೆ 15 ದಿನಗಳ ಕಾಲ ಗಡುವು ನೀಡಲಾಗುವುದು, ನಿರ್ಲಕ್ಷ್ಯ ಮಾಡಿದರೆ ಅಂತಹವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಕಳೆದ ಸೋಮವಾರ ಆರಂಭವಾದ ಕನ್ನಡಾಂಬೆ ರಕ್ಷಣಾ ವೇದಿಕೆ ಕಾಲ್ನಡಿಗೆ ಜಾಥ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭವಾದ ಜಾಥಕ್ಕೆ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ಇನ್ಫೋಸೀಸ್ ಕಂಪನಿ ಮುಂಭಾಗ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ತ್ರಿಭಾಷ ನೀತಿ ಮತ್ತು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಬಗ್ಗೆ ದೊಡ್ಡ ಹೋರಾಟವನ್ನø ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭೌಮ, ಕನ್ನಡಾಂಬೆ ರಕ್ಷಣಾ ವೇದಿಕೆಯ ಹೋರಾಟದ ಜತೆ ನಾವಿದ್ದೇವೆ ಎಂದರು.
ರಾಜ್ಯದಲ್ಲಿ ಕಂಪನಿಗಳು ಕಾರ್ಯನಿರ್ವಹಿಸಲು ಕನ್ನಡಿಗರ ಅಪಾರ ಶ್ರಮ ಕಾರಣವಾಗಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬೆಂಗಳೂರಿನಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಲಕ್ಷಾಂತರ ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ನೀಡಲಾಯಿತು. ಎಷ್ಟು ಕಡಿಮೆ ಎಂದರೇ ದೇಣಿಗೆ ರೂಪದಲ್ಲಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡಿಗರಿಗೆ ಶೇ. 50 ರಷ್ಟು ಉದ್ಯೋಗವನ್ನು ಕಡ್ಡಾಯವಾಗಿ ಕೊಡಲೇಬೇಕು ಎಂಬ ಕಂಡೀಶನ್ ಹಾಕಿದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ, ಉತ್ತರ ಭಾರತೀಯರು ಕರ್ನಾಟಕಕ್ಕೆ ಕೆಲಸ ಹುಡುಕಿಕೊಂಡು ಬಂದರೆ, ನಮ್ಮ ಪಕ್ಕದ ರಾಜ್ಯದ ತೆಲುಗಿನವರು ರಿಯಲ್ ಎಸ್ಟೇಟ್ ಹೆಸರಲ್ಲಿ ನಮ್ಮ ಭೂಮಿಯನ್ನು ಸಂಪೂರ್ಣ ಕಬಳಿಕೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮಾತನಾಡಿ, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವುದು, ಕಾರ್ಖಾನೆಗಳಲ್ಲಿ ಕಾಯಂ ಮತ್ತು ಗುತ್ತಿಗೆ ನೌಕರರ ವೇತನ ಮತ್ತು ಊಟೋಪಚಾರಗಳಲ್ಲಿ ತಾರತಮ್ಯ ಹೋಗಲಾಡಿವುದು, ಇಎಸ್‍ಐ, ಪಿಎಫ್, ಸಮರ್ಪಕವಾಗಿ ಒದಗಿಸುವುದು, ಕಾರ್ಖಾನೆ ಮಾಲಿಕರು ಕಾರ್ಮಿಕರ ಆರೋಗ್ಯ ರಕ್ಷಣೆ ಬಗ್ಗೆ ನಿಗಾ ವಹಿಸುವುದು, ಮಹಿಳಾ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ಅಗತ್ಯ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಆಗ್ರಹಸಿ, ಹೆಬ್ಬಳು ಕೈಗಾರಿಕಾ ಪ್ರದೇಶಗಳ ವಿವಿಧ ಕಾರ್ಖಾನೆಗಳಿಗೆ ಭೇಟಿ ನೀಡಿ, ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಿರಣ್‍ಗೌಡ, ಸೋಮಶೇಖರ್ ರಾಜು, ನಂಜಪ್ಪ ಸಹ ಕನ್ನಡಾಂಬೆ ರಕ್ಷಣಾ ವೇದಿಕೆಯ ಕನ್ನಡಪರ, ಕಾರ್ಮಿಕರ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬುಧವಾರದ ಕೈಗಾರಿಕಾ ಜಾಗೃತಿ ಜಾಥಾದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ಡಿಪಿಕೆ ಪರಮೇಶ್, ರಾಜ್ಯ ಖಜಾಂಚಿ ನಂಜುಂಡ, ಮೈಸೂರು ಜಿಲ್ಲಾ ಅಧ್ಯಕ್ಷ ಸಂತೋಷ್, ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷರಾದ ಮಂಜುಳ, ಪದಾಧಿಕಾರಿಗಳಾದ ಸಿಂಧುವಳ್ಳಿ ಶಿವಕುಮಾರ್, ಮನುಗೌಡ, ಸೋಮಶೇಖರ, ಗೌತಮ್, ಅನುರಾಜ್ ಗೌಡ, ಮಂಜುನಾಥ್, ಸಿದ್ದೇಗೌಡ ಮುಂತಾದವರು ಕಿಕ್ಕೇರಿ ಕಿರಣ, ಶಿವಕುಮಾರ್, ಹೊನ್ನೇಗೌಡ, ರವಿಗೌಡ, ನಾಗರಾಜು, ರಾಜೇಗೌಡ, ಮಹದೇವಸ್ವಾಮಿ, ನೇಹ, ಗುಂಗ್ರಾಲ್ ಛತ್ರ ಲೋಕೇಶ್, ಕಿರಣ ಮತ್ತಿತರರು ಇದ್ದರು.
ಮೈಸೂರಿನ ಕೂರ್ಗಳ್ಳಿ, ಹೂಟಗಳ್ಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶಗಳ ನೂರಾರು ಕಾರ್ಖಾನೆಗಳಿಗೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಕಾಲ್ನಡಿಗೆ ಜಾಥ ಮೂಲಕ ಕನ್ನಡ ಭಾಷೆಯ ಸಮರ್ಪಕ ಬಳಕೆ, ಕಾರ್ಮಿಕರ ಶೋಷಣೆ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಾಗೃತಿ ಮೂಡಿಸಿ ಕರಪತ್ರ ನೀಡಿದ್ದೇವೆ. ಕನ್ನಡ ಭಾಷೆಯ ಬಳಕೆಗಾಗಿ 15 ದಿನಗಳ ಗಡುವು ನೀಡಲಾಗಿದೆ.
• ಬಿ.ಬಿ.ರಾಜಶೇಖರ್, ರಾಜ್ಯಾಧ್ಯಕ್ಷರು
ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು, ಕಾರ್ಮಿಕರ ತಾರತಮ್ಯ ಹೋಗಲಾಡಿಸುವುದು, ಕನ್ನಡ ಭಾಷೆಯ ಬಳಕೆ ಮುಂತಾದ ಕನ್ನಡಾಂಬೆ ರಕ್ಷಣಾ ವೇದಿಕೆಯ ನ್ಯಾಯ ಸಮ್ಮತ ಬೇಡಿಕೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ.
• ಪ್ರತಾಪ್ ಸಿಂಹ, ಮಾಜಿ ಸಂಸದರು