ಮೈಸೂರು : ಹಿಂದುಳಿದ ವರ್ಗಗಳ ಹೋರಾಟಗಾರು ರಾಜ್ಯ ನಾಯಕರಾದ ಜಿ.ಎಂ ಗಾಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಸಿ/ಎಸ್ಟಿ ಮತ್ತು ಸಣ್ಣ ಮತ್ತು ಅತಿ ಹಿಂದುಳಿದ ಸಮುದಾಯಗಳ ಸಭೆಯನ್ನು ಹೋಟೆಲ್ ಗ್ರೀನ್ ಹೆರಿಟೇಜ್‌ನಲ್ಲಿ ಬುಧವಾರ ಸಂಜೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆಯನ್ನು ನೂತನವಾಗಿ ಅಸ್ಥಿತ್ವಕ್ಕೆ ತರಲಾಯಿತು.
ಸಾಮಾಜಿಕ ಹೋರಾಟಗಾರರಾದ ಜಯರಾಜ್ ಹೆಗ್ಡೆ ಮತ್ತು ಜಿ.ಎಂ.ಅಂದಾನಿ, ಹೊಸಕೋಟೆ ಕುಮಾರ್, ಸುಂದರ ಹಣಕೊಳ ಇವರುಗಳ ಮಾರ್ಗದರ್ಶನದಲ್ಲಿ ನೂತನ ಸಂಚಾಲಕರ ಸಮಿತಿಯನ್ನು ರಚಿಸಲಾಯಿತು.
ನೂತನವಾಗಿ ಆಯ್ಕೆಯಾದ ಸಮಿತಿ
ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು.(ನಾಯಕ), ಸಂಚಾಲಕ ಕಾರ್ಯದರ್ಶಿ ಸತ್ಯನಾರಾಯಣ (ಮಡಿವಾಳ), ಸಂಚಾಲಕರು ನಾಡನಹಳ್ಳಿ ಚಂದ್ರಶೇಖರ್ (ದಲಿತ), ತಗಡೂರು ಕೃಷ್ಣ ಉಪ್ಪಾರ), ರಾಮಕೃಷ್ಣ (ಅಲೆಮಾರಿ), ಮುಳ್ಳೂರು ಮಹೇಶ್ (ಕುಂಬಾರ), ರಾಬರ್ಟ್ (ಕ್ರಿಶ್ಚಿಯನ್), ನಾಗರಾಜು ಟಿಂಬರ್, (ವಿಶ್ವಕರ್ಮ), ಅಕ್ಮಲ್ ಪಾಷ(ಮುಸ್ಲಿಂ), ಅಶೋಕಪುರಂ ಜೋಗಿ ಮಹೇಶ್ (ದಲಿತ), ತೊರವಳ್ಳಿ ಟಿ.ಎಲ್.ಸ್ವಾಮಿ (ನಾಯಕ), ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಎಂ.ಗಾಡ್ಕರ್, ಹಿಂದುಳಿದ ದಲಿತ ಸಮಾಜಗಳಿಗೆ ದ್ವನಿಯಾಗಿ ನಿಂತು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನ ಬದ್ದವಾದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ವ್ಯವಸ್ಥಿತವಾಗಿ ರೂಪಿಸುವ ಸಲುವಾಗಿ ದಮನಿತ ಸಮಾಜಗಳ ಸಮಾನ ಮನಸ್ಕರನ್ನು ಒಟ್ಟಿಗೆ ಸೇರಿಸಿ ರಾಜಕೀಯೇರ ಸಂಘಟನೆಯನ್ನು ಕಟ್ಟುವ ಅನಿವಾರ್ಯ ಪ್ರಸ್ತುತ ಅವಶ್ಯಕತೆ ಇರುವುದರಿಂದ ಇಂದು ಎಲ್ಲರ ಸಮ್ಮತಿಯೊಂದಿಗೆ ಈ ನೂತನ ಸಂಘಟನೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ.
ಈ ಸಂಘಟನೆ ರಾಜ್ಯ ಮಟ್ಟದಾಗಿದ್ದು ಇಲ್ಲಿ ಯಾವುದೇ ಅಧ್ಯಕ್ಷರು ಅಥವಾ ಪ್ರಮುಖ ಹುದ್ದೆಗಳು ಇಲ್ಲದೆ ಎಲ್ಲರೂ ಸರಿಸಮವಾಗಿ ಸಂಘಟನೆ ಮಾಡುವ ಮೂಲಕ ಸಮೂಹಿಕ ನಾಯತ್ವದಲ್ಲಿ ಈ ಸಂಘಟನೆ ಸಣ್ಣ ಸಣ್ಣ ಹಿಂದುಳಿದ ಸಮಾಜದ ಪರವಾಗಿ ಹೋರಾಟ ಮಾಡುವ ವೇದಿಕೆಯಾಗಿರುತ್ತದೆ ಹಾಗೂ ತಳಮಟ್ಟದಿಂದಲೂ ಸಂಘಟನೆಯನ್ನು ಮಾಡುವ ಉದ್ದೇಶದಿಂದ ಪ್ರಥಮವಾಗಿ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ಎಲ್ಲಾ ಹೋಬಳಿ, ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಸಭೆಗಳನ್ನು ಮಾಡಿ ಜನರ ಮುಂದೆ ಸಂಚಾಲಕರನ್ನು ಆಯ್ಕೆ ಮಾಡಿ ಸಣ್ಣ ಮತ್ತು ಅತಿಸಣ್ಣ ಸಮುದಾಯದ ಹೋರಾಟ ಮನೋಭಾವವುಳ್ಳವನ್ನು ಸಂಚಾಲಕರನ್ನಾಗಿ ನೇಮಕ ಮಾಡಿ ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ಆಳುವ ಸರ್ಕಾರದ ವಿರುದ್ಧ ಸಂವಿಧಾನಬದ್ದ ಹಕ್ಕುಗಳಿಗಾಗಿ ಚಳುವಳಿಗಳನ್ನು ರೂಪಿಸಲಾಗುವುದು ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ ಕಾಟೂರು ಅವರು ಆಶಯ ನುಡಿಗಳನ್ನಾಡುತ್ತಾ, ಪ್ರಸ್ತುತ ದಿನಗಳಲ್ಲಿ ದಲಿತ, ಹಿಂದುಳಿದ ವರ್ಗಗಳ ಪರವಾಗಿ ಚಳುವಳಿ ಮರಿಚಿಕೆ ಆಗಿರುವುದರಿಂದ ಸರ್ಕಾರದಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮರ್ಪಕ ಸವಲತ್ತುಗಳು ಬಡವರಿಗೆ ತಲುಪುತ್ತಿಲ್ಲಾ, ರಾಜಕೀಯ ಸ್ಥಾನಮಾನಗಳು ಬಲಿತ ಸಮಾಜಗಳ ಪಾಲಾಗುತ್ತಿವೆ, ಆಳುವ ಸರ್ಕಾರಗಳು ನೆಪಮಾತ್ರಕ್ಕೆ ಅಲ್ಪ ಸವಲತ್ತುಗಳನ್ನು ನೀಡಿ ಎಲ್ಲ ಅತಿ ಮತ್ತು ಸಣ್ಣಹಿಂದುಳಿದ ಸಮಾಜಗಳನ್ನು ಸಂವಿಧಾನದ ಬದ್ದ ಹಕ್ಕುಗಳನ್ನು ನೀಡದೆ ಮೂಲ ಗುಂಪು ಮಾಡಿವೆ. ಆದರಿಂದ ಸಾಮಾಜಿಕ ಹೋರಾಟದ ಮನೋಭಾವ ಇರುವ ಸಮಾನ ಮನಸ್ಕರು ಪ್ರಾಮಾಣಿಕವಾಗಿ ಹಿಂದುಳಿದವರ ಪರವಾಗಿ ದ್ವನಿಯಾಗಿ ನಿಂತು ಹೋರಾಟ ಮಾಡಿದ ಮಾತ್ರ ಸರ್ಕಾರ ನಮ್ಮ ಹಕ್ಕು ಬದ್ದ ಸವಲತ್ತುಗಳನ್ನು ನೀಡುತ್ತದೆ ಆದರಿಂದ ಪಕ್ಷಾತೀತವಾಗಿ ದಮನಿತರ ಸಮಾಜದಗಳ ವೇದಿಕೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಜಯರಾಜ್ ಹೆಗ್ಡೆ ಮಾತನಾಡುತ್ತಾ, ಈ ವೇದಿಕೆಯು ಯಾವುದೇ ಪಕ್ಷದ ಪರವಾಗಿರದೆ ಪ್ರಗತಿಪರ ಚಿಂತನೆ, ಸಾಮಾಜಿಕ ಚಿಂತನೆಯನ್ನು ಒಳಗೊಂಡು ಅನ್ಯಾಯವಾದ ಸಮಾಜದ ಪರವಾಗಿ ನಿಂತು ಹೋರಾಟ ಮಾಡಿ ನ್ಯಾಯ ಕೊಡಿಸುವ ಮಾದರಿ ಸಂಘಟನೆಯಾಗಿ ಕಟ್ಟುವ ಈ ಸಂಘಟನೆಗೆ ಎಲ್ಲಾ ಸಮಾಜಗಳ ಬೆಂಬಲ ನೀಡಬೇಕೆಂದು ಕೋರಿದರು.
ಈ ಸಭೆಯಲ್ಲಿ ದಲಿತ ಮುಖಂಡರಾದ ಸುಂದರ ಹಣಕೊಳ, ಉಪ್ಪಾರ ಸಮಾಜದ ಬಸವರಾಜು ಮೊಳೆ, ಸಿದ್ದಪ್ಪ, ಸವಿತ ಸಮಾಜದ ಹರೀಶ್, ಬನ್ನೂರು ಪುರಸಭೆ ಸದಸ್ಯರಾದ ನಾಗರಾಜುಚಾರ್, ಮಾಜಿ ಪುರಸಭೆ ಸದಸ್ಯರಾದ ಸಿದ್ದರಾಜು, ಬೇವಿನಹಳ್ಳಿ ಮಹದೇವು, ದಲಿತ ಮುಖಂಡರಾದ ರಾಜೇಂದ್ರ ಪ್ರಸಾದ್ ಇನ್ನೂ ಮುಂತಾದ ಸಮುದಾಯದ ಮುಖಂಡರು ಭಾಗವಹಿಸಿದರು.