ಆಹಾರ ಪ್ರಿಯರಿಗೆ ಸಿಹಿ ಸುದ್ದಿ : 22ರಿಂದ ಮೈಸೂರು ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂದವರಿಂದ ತಯಾರಾದ ಬಂಬೂ ಬಿರಿಯಾನಿ ಮಾರಾಟಕ್ಕೆ

ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ವಿಶ್ವವಿಖ್ಯಾತ ಮೈಸೂರು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದವರು ಕಾಡಿನ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಮತ್ತು ಕೆಂಡದಲ್ಲಿ ಬೇಯಿಸುವ ಬಂಬೂ ಬಿರಿಯಾನಿ ಸವಿಯುವ ಸದಾವಕಾಶ ಸೆ.22 ರಿಂದ ಲಭ್ಯವಿದೆ.

ಈ ಕುರಿತು ಭಾನುವಾರ ನಗರದ ಗೋವರ್ಧನ್ ಹೋಟೆಲ್‍ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕೃತಿ ಆದಿವಾಸಿ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರಾದ ಎಂ. ಕೃಷ್ಣಯ್ಯ ಮಾತನಾಡಿ, ಮಹಾರಾಜ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ರಾಜ್ಯದ ವಿವಿಧ ಬುಡಕಟ್ಟುಗಳ ಪಾರಂಪರಿಕ ಆಹಾರ ಪದ್ಧತಿ ಬುಡಕಟ್ಟು ಶೈಲಿಯ ಕುಟೀರಗಳನ್ನು ನಿರ್ಮಿಸಲಾಗಿದೆ. ಆಹಾರ ಮೇಳಕ್ಕೆ ಸೌಂದರ್ಯವಾದ ಮೆರಗನ್ನು ತಂದು ಕೊಡುವ ನಿಟ್ಟಿನಲ್ಲಿ ದಿನಾಂಕ 22 ರಿಂದ ಅಕ್ಟೋಬರ್ 5 ರವರಿಗೆ ನಡೆಯುವ ಆಹಾರ ಮೇಳದಲ್ಲಿ ಆದಿವಾಸಿ ಬುಡಕಟ್ಟು ಶೈಲಿಯ ಆಹಾರಗಳಾದ ಬೆಂಕಿಯಿಂದ ಬೇಯಿಸಿದ ಬಿದಿರು ಬೊಂಬಿನ ಬಿರಿಯಾನಿ, ಬಿದರಕ್ಕಿ ಪಾಯಿಸ, ಮಾಕಳಿ ಬೇರಿನ ಟೀ, ಕಾಡುಗೆಣಸು, ಜೇನುತುಪ್ಪದ ಮಿಶ್ರಣ, ನಳ್ಳಿ ಸಾಂಬಾರು ಮುದ್ದೆ, ಕಾಡುನಲ್ಲಿಕಾಯಿ ವಿವಿಧ ಬಗೆಯ ಕಾಡು ಸೊಪ್ಪುಗಳಾದ, ಆಲೆಸೊಪ್ಪು,ಮಾಡಲೇ ಸೊಪ್ಪು, ತುಂಬೆ ಸೊಪ್ಪು, ಅಣ್ಣೆಸೊಪ್ಪು, ಇಂಡಿಸೊಪ್ಪು ಮುಂತಾದ ಸೊಪ್ಪಿನ ಪಲ್ಯಗಳನ್ನು ತಯಾರು ಮಾಡಲಾಗುವುದು, ಕಾಡುಕೊತ್ತಂಬರಿ ಸೊಪ್ಪು, ಕಾಡು ಶುಂಠಿ, ಕಾಡು ಅರಿಸಿಣ ಮಿಶ್ರಿತ ಮಸಾಲೆಯೊಟ್ಟಿಗೆ ವಿವಿಧ ಬಗೆಯ ನೈಸರ್ಗಿಕವಾದಂತಹ ಆರೋಗ್ಯ ಪೂರಕವಾದ ಅಂತಹ ಔಷಧಿಗುಣವುಳ್ಳ ಆಹಾರಗಳನ್ನು ಸವಿಯಲು ಆಹಾರ ಪ್ರಿಯರು ಆದಿವಾಸಿ ಕುಟೀರಕ್ಕೆ ಭೇಟಿ ನೀಡಿ ಆದಿವಾಸಿ ಬುಡಕಟ್ಟು, ಆಹಾರಗಳನ್ನು ಪೆÇ್ರೀತ್ಸಾಹಿಸಲು ಎಂ.ಕೃಷ್ಣಯ್ಯ ನಾಗರಿಕರು ಮತ್ತು ಪ್ರಸಾಸಿಗರು ಹಾಗೂ ಆಹಾರ ಪ್ರಿಯರಲ್ಲಿ ಮನವಿ ಮಾಡಿದ್ದಾರೆ. ಆದಿವಾಸಿ ಕುಠೀರದಲ್ಲಿ ಕೊಡಗು ಜಿಲ್ಲೆ ಜಾನಪದ ಅಕಾಡೆಮಿ ಪುರಸ್ಕೃತರು ಹಾಗೂ ಗಿಡಮೂಲಿಕೆ ತಜ್ಞರಾದ ನಾಗಮ್ಮ ಅವರು ಸಹ ಆಹಾರ ಮೇಳದಲ್ಲಿ ಭಾಗವಹಿಸುತ್ತಿದ್ದು, ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆ  ಔಷಧಿಗಳಿಂದ ಗುಣಪಡಿಸಲಿದ್ದು ಇದರ ಅವಕಾಶವನ್ನು ಪಡೆದುಕೊಳ್ಳಲು ಕೋರಲಾಗಿದೆ. 

ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ, ಸೋಮಯ್ಯ ಮಲೆಯೂರು, ಜಿ.ಸ್ವಾಮಿ, ಮಂಗಳಪ್ಪ ಇದ್ದರು.

ಆದಿವಾಸಿ ಕುಠೀರದಲ್ಲಿ ಲಭ್ಯವಿರುವ ಆಹಾರಗಳ ದರಪಟ್ಟಿ

ಬೊಂಬು ಬಿರಿಯಾನಿ (200 ರೂ), ನಾಟಿ ಕೋಳಿ ಬೊಂಬು ಬಿರಿಯಾನಿ (250 ರೂ), ಮಟನ್ ಬಿರಿಯಾನಿ (300 ರೂ.) ಮಾಕಳಿಬೇರಿನ ಟೀ (20 ರೂ.), ಕಾಡುಗೆಣಸು ಜೇನುತುಪ್ಪ ಮಿಶ್ರಣ (50 ರೂ,) ನಳ್ಳಿ (ಕ್ರಾಬ್) ಸಾರು ಮುದ್ರೆ (150 ರೂ) ವಿವಿಧ ಕಾಡು ಸೊಪ್ಪುಗಳ ಪಲ್ಯ (50), ಬಿದರಕ್ಕಿ ಪಾಯಿಸ (50)