1.40 ಕೋಟಿ ಲಾಭದಲ್ಲಿ ‘ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್’ : ಜೆ.ಯೋಗೇಶ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆ


 ವರದಿ : ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು: ಶತಮಾನ ಪೂರೈಸಿದ ನಗರದ ಗಾಂಧಿಚೌಕದಲ್ಲಿರುವ ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ಬರೋಬ್ಬರಿ 33333 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 1ಕೋಟಿ 40ಲಕ್ಷ ನಿವ್ವಳ ಲಾಭವನ್ನು ಪಡೆದಿರುವುದಾಗಿ ಘೋಷಿಸಿದೆ.  

ನಗರದ ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಜೆ.ಯೋಗೇಶ್ ಅಧ್ಯಕ್ಷತೆಯಲ್ಲಿ 119ನೇ ವಾರ್ಷಿಕ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ವೇಳೆ 10968.89ಲಕ್ಷ ರೂ. ಸಾಲ ನೀಡಿದ್ದು, ಶೇ.10ರಷ್ಟು ಡಿವಿಡೆಂಡ್ ಅನ್ನು ಘೋಷಿಸಿದೆ. ಇದೇ ವೇಳೆ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ ಬಳಕೆ, ಸಿಹಿ ವಿತರಣೆ ಹಾಗೂ ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು. ಸಭೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳಿಗೆ ಸನ್ಮಾನಿಸಲಾಯಿತು. ಜತೆಗೆ ಬ್ಯಾಂಕಿನ ಷೇರು ಹೊಂದಿದ ಹಿರಿಯ 119ಮಂದಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷ ಜೆ.ಯೋಗೇಶ್ ಮಾತನಾಡಿ, 1ಕೋಟಿ 40ಲಕ್ಷ ರೂ. ಲಾಭದಲ್ಲಿ ಬ್ಯಾಂಕ್ ನಡೆಯುತ್ತಿದೆ. ನನ್ನ ಅವಧಿಯಲ್ಲಿ ಶೇ.32ರಷ್ಟಿದ್ದ ಎನ್‍ಪಿ ಯನ್ನು 40 ದಿನದಲ್ಲಿ ಶೇ.5.46ಕ್ಕೆ ನಿಲ್ಲಿಸಿದ್ದೇನೆ. ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ ಎಂದರೆ ಎನ್‍ಪಿ 5.6 ಒಳಗೆ ಇರಬೇಕು. ಆಡಳಿತ ಮಂಡಳಿ ಸಹಕಾರದಿಂದ ಇದನ್ನು ಕಾರ್ಯಗತ ಮಾಡಿದ್ದೇವೆ. ಮಾರ್ಚ್ ಒಳಗೆ ವಸೂಲಾತಿ ಮಾಡಿದ್ದರ ಫಲವಾಗಿ 1ಕೋಟಿ 40ಲಕ್ಷ ಲಾಭ ತಂದಿದ್ದೇವೆ. ಎಸ್‍ಬಿ ಖಾತೆಯನ್ನು ಪ್ರತಿಯೊಬ್ಬರೂ ತೆರೆಯುವ ಮೂಲಕ ಯುಪಿಎ ಆನ್‍ಲೈನ್ ಮೂಲಕವೂ ಬ್ಯಾಂಕ್‍ನಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ಈ ಬಾರಿ ನಮ್ಮದೇ ನಂದಿನಿಯ ಗುಣಮಟ್ಟದ ಸಿಹಿ ವಿತರಣೆ ಮಾಡಿದ್ದೇವೆ. ಜತೆಗೆ ಡಿವಿಡೆಂಡ್ ಹೆಚ್ಚಳ ಮಾಡುವಂತೆ ಸದಸ್ಯರು ಬೇಡಿಕೆಯಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮರಣವಂತಿಗೆ  ನಾಲ್ಕು ವರ್ಷದಿಂದ ಮರಣ ನಿಧಿ ಕಟ್ಟಿಲ್ಲವಾಗಿದೆ. ಸದ್ಯಕ್ಕೆ ಶೇ.70ರಷ್ಟು ಮಂದಿ 500ರೂ. ವಂತಿಗೆ ಕಟ್ಟಿದ್ದಾರೆ. ಇನ್ನೂ ಶೇ.30ರಷ್ಟು ಡಿ.31ರವರೆಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಸದಸ್ಯರೂ ಈ ಅವಧಿಯಲ್ಲಿ ಮರಣ ನಿಧಿ ಕಡ್ಡಾಯವಾಗಿ ಕಟ್ಟುವಂತೆ ಜಾಗೃತಿ ಮೂಡಿಸಲಾಗುವುದು. ಅನಂತರ ಮರಣನಿಧಿ ವಂತಿಗೆ ಕಟ್ಟದವರಿಗೆ ಸ್ಥಗಿತಗೊಳಿಸುವ ಬಗ್ಗೆ ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದರು.

ಉಪಾಧ್ಯಕ್ಷ ಟಿ.ರವಿ ಮಾತನಾಡಿ, ನೂತನ ಆಡಳಿತ ಮಂಡಳಿ ಮೂಲಕ ಸದಸ್ಯರಿಗೆ ಅನೇಕ ರೀತಿಯ ಸೌಲಭ್ಯ ಒದಗಿಸಿದ್ದೇವೆಂದು ವಿವರಿಸಿದರು.  

ಮುಖ್ಯಕಾರ್ಯನಿರ್ವಾಹಕ ಕೆ.ಹರ್ಷಿತ್‍ಗೌಡ ಮಾತನಾಡಿ, ಸಹಿ ಮಾಡಿದವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗುತ್ತಾರೆ. ಮಾತ್ರವಲ್ಲದೆ, ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ಯುಪಿಎ ಸೌಲಭ್ಯ ಸಹ ಜಾರಿಗೆ ತಂದಿದ್ದೇವೆ. ಹೆಚ್ಚಿನ ಡಿವೈಡೆಂಡ್ ಕೊಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಬ್ಯಾಂಕಿನ ಸದಸ್ಯತ್ವ ನೊಂದಣಿಯಲ್ಲಿ ಹಿರಿಯರಾದವರಿಗೆ 16300ರಿಂದ 119ಮಂದಿಯನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು. ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ ಮಾತನಾಡಿ, 119 ವರ್ಷಗಳ ಇತಿಹಾಸ ಇರುವ ಅತ್ಯಂತ ಹೆಚ್ಚು ಸದಸ್ಯರನ್ನು ಒಳಗೊಂಡ ಅಷ್ಟು ಮಂದಿ ಸದಸ್ಯರಿದ್ದಾರೆ. ಅತ್ಯಂತ ಹಬ್ಬದ ರೀತಿಯಲ್ಲಿ ವಾರ್ಷಿಕ ಸಭೆ ಮಾಡಿದ್ದೇವೆ. ಆರು ತಿಂಗಳಿಂದ ಹೊಸ ಬೋರ್ಡ್ ಸದಸ್ಯರ ಮನೆ ಬಾಗಿಲಿಗೆ ಸೌಲಭ್ಯವನ್ನು ಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಲಾಭದಲ್ಲೇ ಪ್ರತಿ ವರ್ಷ ನಡೆಯುತ್ತಿದ್ದು, ಎನ್‍ಪಿಎ ವಿಚಾರದಲ್ಲಿ ಚೆನ್ನಾಗಿದ್ದೇವೆ. ಉತ್ತಮವಾದ ಕೆಲಸವನ್ನು ಅಧ್ಯಕ್ಷರ ನೇತೃತ್ವದಲ್ಲಿ ಮಾಡುತ್ತಿದ್ದೇವೆಂದರು. 

ನಿರ್ದೇಶಕರಾದ ಎಸ್.ಬಿ.ಎಂ.ಮಂಜು, ಎನ್.ಯೋಗನಂದ, ಜಿ.ನಿರಂಜನ್, ಎಚ್.ಹರೀಶ್‍ಕುಮಾರ್, ಆರ್.ರವಿಕುಮಾರ್(ರಾಜಕೀಯ), ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶ್‍ಗೌಡ, ಸಿ.ಎಸ್.ರಾಮಕೃಷ್ಣಯ್ಯ, ಕಾನೂನು ಸಲಹೆಗಾರರಾದ ಕೆ.ಆರ್.ಶಿವಶಂಕರ್, ಎಂ.ಬಿ.ಬಾಲಾಜಿಸಿಂಗ್, ಸಿ.ಎನ್.ಸುಂದರೇಶ್, ಆರ್.ಎಸ್.ಆನಂದ್, ಕೆ.ಕೋದಂಡರಾಮ, ವಿ.ಚಂದನ, ಆರ್.ರವಿ, ಎಚ್.ಸಿ.ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.