ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಮುತ್ತೈದೆಯರಿಗೆ ಬಾಗೀನ ಅರ್ಪಣೆ


 ವರದಿ: ನಿಷ್ಕಲ, ಎಸ್.ಗೌಡ, ಮೈಸೂರು

ಮೈಸೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ 30ಕ್ಕೂ ಹೆಚ್ಚು ಮುತೈದೆಯರಿಗೆ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಬಾಗೀನ ಅರ್ಪಿಸಿದರು.

ಸೋಮವಾರ ಬೆಳಗ್ಗೆ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ.ಭಾಷ್ಯಂ ಸ್ವಾಮೀಜಿ ಮತ್ತು ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮತ್ತು ಬಿ.ಬಿ.ರಾಜಶೇಖರ್ ಅವರು ಕನ್ನಡಾಂಬೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಕುಟುಂಬದವರಿಗೆ ಬಾಗೀನ ಅರ್ಪಿಸಿದರು.

ಈ ಸಂದರ್ಭದಲ್ಲಿ ಪ್ರೊ.ಭಾಷ್ಯಂ ಸ್ವಾಮೀಜಿ ಮಾತನಾಡಿ, ವಿಶ್ವವಿಖ್ಯಾತ ಗೌರಿ ಗಣೇಶ ಹಬ್ಬವು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಾಗಿಲ್ಲ, ಥೈಲ್ಯಾಂಡ್, ಜಪಾನ್, ಹಾಂಕಾಂಗ್ ನಲ್ಲೂ ಗಣಪತಿಯನ್ನು ಪೂಜಿಸಲಾಗುತ್ತದೆ. ಇಂದು ಬಾಗೀನ ಸ್ವೀಕರಿಸಿದ ಎಲ್ಲ ಮುತ್ತೈದೆಯರೂ ಗೌರಿಯ ಸ್ವರೂಪದಲ್ಲಿದ್ದಾರೆ. ಇದೊಂದು ಅಸಾಧಾರಣ ಕಾರ್ಯಕ್ರಮ ಮುವತ್ತೂಕ್ಕೂ ಹೆಚ್ಚು ಮುತ್ತೈದೆಯರಿಗೆ ಬಾಗೀನ ಅರ್ಪಿಸಿರುವುದು ಶಕ್ತಿಯ ಪ್ರತಿಷ್ಠಾಪನೆ ಮಾಡಿದಂತಿದೆ. ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಕೈಗೊಂಡಿರುವ ಈ ಕಾರ್ಯಕ್ರಮ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು.

ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದ್ದು, ಮುತ್ತೈದೆಯರಿಗೆ ಬಾಗೀನ ಅರ್ಪಿಸುವ ಮೂಲಕ ಬಿ.ಬಿ.ರಾಜಶೇಖರ್ ಅವರು ಮಹಿಳೆಯರನ್ನು ಗೌರವಿಸಿದ್ದಾರೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿ.ಬಿ.ರಾಜಶೇಖರ್ ಮಾತನಾಡಿ, ಕನ್ನಡಾಂಬೆ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮತ್ತು ಕುಟುಂಬದವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಬಾಗೀನ ಅರ್ಪಿಸುವ ಮೂಲಕ ನಮ್ಮ ಸನಾತನ ಧರ್ಮದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ನಾಡೋಜ ಪ್ರೊ.ಭಾಷ್ಯ ಸ್ವಾಮೀಜಿ ಅವರು ಆಗಮಿಸಿ ಮುತ್ತೈದೆಯರಿಗೆ ಬಾಗೀನ ಅರ್ಪಿಸಿರುವುದು ನಮ್ಮ ಸುದೈವ. ಈ ಕ್ಷೇತ್ರದಲ್ಲಿ ಮತ್ತಷ್ಟು ಶುಭ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್, ಡಿಪಿಕೆ ಪರಮೇಶ್, ಖಜಾಂಚಿ ನಂಜುಂಡ, ಸಿಂಧೂವಳ್ಳಿ ಶಿವಕುಮಾರ್, ಹೊನ್ನೇಗೌಡ, ನಾಗರಾಜು, ಶಿವಕುಮಾರ್, ಹರೀಶ್, ಲೋಕೇಶ್, ಮಂಜುಳಾ, ಸ್ವಾಮೀಗೌಡ, ಸಂತೋಷ್, ಅನುರಾಜ್, ಗೌತಮ್ ರಾಜ್, ರವಿಗೌಡ, ಲಕ್ಷ್ಮಿ, ಹರಿಣಿ, ಆಶಾ, ಪ್ರೇಮ , ನೇಹಾ , ಪ್ರಮೀಳಾ , ಅಶ್ವಿನಿ, ಜಯಶೀಲ, ಸೌಭಾಗ್ಯ, ನಂದಿನಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು