ವರದಿ: ಎಸ್.ನಿಷ್ಕಲ,ಮೈಸೂರು
ಮೈಸೂರು: ನಗರದ ಗಾಂಧಿ ಚೌಕದಲ್ಲಿರುವ ಮೈಸೂರಿನ ಪ್ರತಿಷ್ಠಿತ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವಂತೆ ಉಚಿತವಾಗಿ ಕಿವಿ (ಶ್ರವಣ)ತಪಾಸಣಾ ಶಿಬಿರವು ಬ್ಯಾಂಕಿನ ಆವರಣದಲ್ಲಿ ನಡೆಯಿತು.
ನೂರಾರು ಷೇರುದಾರರು ಶಿಬಿರದಲ್ಲಿ ಭಾಗವಹಿಸಿ ತಮ್ಮ ಕಿವಿಯನ್ನು ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಜೆ. ಯೋಗೇಶ್ ಮಾತನಾಡಿ, ನಮ್ಮ ಬ್ಯಾಂಕಿನ ಸದಸ್ಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಇದ್ದಾರೆ. ಶ್ರವಣದೋಷದಂತಹ ವಯೋ ಸಹಜ ಕಾಯಿಲೆಯ ತಪಾಸಣೆ ಮಾಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದ ಕಾರಣ, ಈ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿಯ ಸಲಹೆ ಸಹಕಾರ ಪಡೆದು ನಮ್ಮ ಬ್ಯಾಂಕಿನ ಹಿರಿಯ ಸದಸ್ಯರಿಗೆ ನೆರವಾಗಲು ಈ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು. ಈ ವೇಳೆ ಬ್ಯಾಂಕಿನ ಉಪಾಧ್ಯಕ್ಷರಾದ ರವಿ, ನಿರ್ದೇಶಕರಾದ ಎಸ್ ಬಿಎಂ ಮಂಜು, ಎನ್. ಯೋಗಾನಂದ್, ಜಿ.ನಿರಂಜನ್, ಹೆಚ್. ಹರೀಶ್ ಕುಮಾರ್, ಆರ್. ರವಿಕುಮಾರ್ (ರಾಜಕೀಯ), ಆರ್. ಸೋಮಣ್ಣ, ಕೆ. ಗಿರೀಶ್, ಪಡುವಾರಹಳ್ಳಿ ಎಂ. ರಾಮಕೃಷ್ಣ, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ಕಾರ್ಯದರ್ಶಿ ಕೆ.ಹರ್ಷಿತ್ ಗೌಡ, ಮತ್ತಿತರರು ಹಾಜರಿದ್ದರು.
0 ಕಾಮೆಂಟ್‌ಗಳು