ಮೈಸೂರು : ನಗರದ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಆಭರಣ ತಯಾರಕರಾದ ಎ. ಶಂಕರ ಚೆಟ್ಟಿ ಅಂಡ್ ಸನ್ಸ್ ಸಂಸ್ಥೆ, ಇದೀಗ ತನ್ನ ಶತಮಾನೋತ್ಸವ ಸಮಾರಂಭವನ್ನು ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುವ ಮೂಲಕ ಅದ್ಧೂರಿಯಾಗಿ ಆಚರಿಸುತ್ತಿದೆ.
ನಿಷ್ಠೆ, ಪರಂಪರೆ ಮತ್ತು ಶ್ರೇಷ್ಠತೆಯ 100 ವರ್ಷಗಳ ಯಶಸ್ಸಿನಲ್ಲಿ ಬೀಗುತ್ತಿರುವ ಈ ಸಂಸ್ಥೆ 1925ರಲ್ಲಿ ಎ. ಶಂಕರ ಚೆಟ್ಟಿಯವರ ಸ್ಮರಣಾರ್ಥವಾಗಿ ಅವರ ಪುತ್ರ ಎ. ಗೋಪಾಲ ಚೆಟ್ಟಿಯವರು ಸ್ಥಾಪಿಸಿದ ಆಭರಣಾ ತಯಾರಿಕಾ ಸಂಸ್ಥೆ.
ಸರಳ ಆರಂಭದಿಂದ ಹಿಡಿದು ಇಂದು ರಾಜಕೀಯ ಶೈಲಿಯ ಮೆರುಗು ಮತ್ತು ಕಲಾತ್ಮಕ ಕೌಶಲ್ಯದ ಪರಿಪೂರ್ಣತೆಗೂ ಸಮಾನಾರ್ಥಕವಾದ ಹೆಸರಾಗಿರುವ ತನಕ ಬೆಳೆಯಲಾಗಿದೆ.
ಶತಮಾನದ ಸಂಭ್ರಮದ ಪ್ರಯುಕ್ತ ಎ. ಶಂಕರ ಚೆಟ್ಟಿ ಅಂಡ್ ಸನ್ಸ್ ತನ್ನ ಗ್ರಾಹಕರಿಗೆ ವಿಶೇಷ ಉಡುಗೋರೆ ನೀಡಲು ಮುಂದಾಗಿದೆ.
ಆಗಸ್ಟ್ 2 ರಿಂದ 9ರ ತನಕ ಒಂದು ಗ್ರಾಂ ಚಿನ್ನಕ್ಕೆ 600 ರೂ ರಿಯಾಯತಿ ಘೋಷಿಸಿದ್ದು, ಒಂದು ಕೆಜಿ ಬೆಳ್ಳಿ ಖರೀದಿಗೆ 1000 ರೂ. ಮತ್ತು ಒಂದು ಕ್ಯಾರೆಟ್ ವಜ್ರಕ್ಕೂ 1000 ರೂ. ರಿಯಾಯತಿ ಘೋಷಿಸಿದೆ.
ಅಲ್ಲದೇ, ಆಗಸ್ಟ್ 9 ರಿಂದ 100 ದಿನಗಳ ಕಾಲ ವಿಶೇಷ ಕೊಡುಗೆಯನ್ನೂ ಸಹ ಘೊಷಣೆ ಮಾಡಿದೆ.
ಅಲ್ಲದೇ ಈ ನೂರು ದಿನಗಳ ಸಂಭ್ರಮದಲ್ಲಿ ಕನಿಷ್ಠ 5,000 ರೂ ಮೊತ್ತದ ಯಾವುದೇ ಆಭರಣ ಖರೀದಿ ಮಾಡಿದ್ದಲ್ಲಿ, ಒಂದು ಗಿಫ್ಟ್ ಕೂಪನ್ ನೀಡಲಾಗುವುದು. ಈ ಕೂಪನ್ ಮೂಲಕ ಅದೃಷ್ಟಶಾಲಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಗೆಲ್ಲುವ ಅವಕಾಶವನ್ನೂ ಸಹ ಕಲ್ಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಎ. ಶಂಕರ ಚೆಟ್ಟಿ ಅಂಡ್ ಸನ್ಸ್ ಮಾಲೀಕರಾದ ಆದರ್ಶ ಎನ್.ಮೂರ್ತಿ ಅವರು ಮಾತನಾಡಿ, ಎ. ಶಂಕರ ಚೆಟ್ಟಿ ಅಂಡ್ ಸನ್ಸ್ ತನ್ನ ಮೊಬೈಲ್ ಆಪ್ ಸಹ ನಿರ್ಮಿಸಿದ್ದು, ಯಾವುದೇ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಈ ಆಪ್ ಡೌನ್‍ಲೋಡ್ ಮಾಡಿದರೆ ಒಂದು ಗ್ರಾಂ ಬೆಳ್ಳಿ ಉಚಿತವಾಗಿ ದೊರೆಯುತ್ತದೆ. ಮತ್ತು ಈ ಆಪ್ ಮೂಲಕ ಗ್ರಾಹಕರು ತಮ್ಮ ಹಣವನ್ನು ಚಿನ್ನ ಖರೀದಿಯಲ್ಲಿ ಉಳಿತಾಯವನ್ನೂ ಮಾಡಬಹುದು. ಅಂದು ಉಳಿಯಾದ ಮಾಡಿದ ಮೊತ್ತಕ್ಕೆ ಚಿನ್ನವನ್ನು ಎತ್ತಿಡಲಾಗುವುದು. ನಂತರ ಒಟ್ಟಾರೆ ಉಳಿಯಾದಲ್ಲಿ ಚಿನ್ನ ಖರೀದಿ ಮಾಡಬಹುದು.ಬೇಡವಾದಲ್ಲಿ ಆಪ್ ಮೂಲಕವೇ ಚಿನ್ನವನ್ನು ಮಾರಾಟ ಮಾಡಬಹುದು ಎಂದು ವಿವರಣೆ ನೀಡಿದರು.
ಆಗಸ್ಟ್ 3 ರಂದು ಎ. ಶಂಕರ ಚೆಟ್ಟಿ ಅಂಡ್ ಸನ್ಸ್ ಚಿನ್ನಾಭರಣ ಮಳಿಗೆಯಲ್ಲಿ ಗಂಡಭೇರುಂಡ ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಜಿ.ಕೃಷ್ಣಮೂರ್ತಿ. ಲಕ್ಷ್ಮಿ ಮೂರ್ತಿ, ಪಲ್ಲವಿ ಆದರ್ಶ ಇದ್ದರು.
0 ಕಾಮೆಂಟ್‌ಗಳು