ಮೈಸೂರಿನಲ್ಲಿ ಅನಂತ್ ಮಹಿಂದ್ರಾ ಕಾರ್ ಶೋರೂಂ ಉದ್ಘಾಟಿಸಿದ ಸಂಸದ ಯದುವೀರ್ ಒಡೆಯರ್ : ರೈತಮುಖಂಡ ಇಂಗಲಗುಪ್ಪೆ ಕೃಷ್ಣೇಗೌಡರಿಗೆ ನೂತನ ಕಾರಿನ ಕೀ ಹಸ್ತಾಂತರ


 ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ಸಿದ್ಧಾರ್ಥನಗರದ ಬಳಿ ನೂತನವಾಗಿ ಪ್ರಾರಂಭಿಸಲಾಗಿರುವ ಅನಂತ್ ಮಹಿಂದ್ರಾ ಕಾರ್ ಶೋರೂಂ ಅನ್ನು ಮೈಸೂರು-ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೋಮವಾರ ಉದ್ಘಾಟಿಸಿದರು. 

ಬಳಿಕ ಅವರು ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ಅನಂತ್ ಮಹಿಂದ್ರಾ ಕಾರ್ ಶೋರೂಂ ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ. ಮಹಿಂದ್ರಾ ಸಂಸ್ಥೆಯು ಒಂದು ಭಾರತೀಯ ಸಂಸ್ಥೆ ಅತ್ಯಂತ ಪ್ರಖ್ಯಾತವಾಗಿದೆ. ತಂತ್ರಜ್ಞಾನವೂ ಭಾರತೀಯದೇ ಆಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಿಂದ ಮೈಸೂರು ನಗರದ ಆರ್ಥಿಕತೆಯೂ ಹೆಚ್ಚಾಗಲಿದೆ. ಮಹಿಂದ್ರಾ ಥಾರ್ ವಾಹನ ಪ್ರಖ್ಯಾತವಾಗಿದ್ದು, ಕೊಡಗು ಜಿಲ್ಲೆಯ ಮೂಲೆ ಮೂಲೆಗೂ ಸಂಚರಿಸಬಹುದಾಗಿದೆ. ನಮ್ಮ ಮನೆಯಲ್ಲೂ ಮಹಿಂದ್ರಾ ವಾಹನಗಳಿವೆ ಎಂದರು.

ಬಳಿಕ ಅವರು ಶೋಂರೂಂನಲ್ಲಿ ವಿವಿಧ ನೂತನ ಕಾರುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಸೇರಿದಂತೆ ಸುಮಾರು ಐದು ಜನ ಗ್ರಾಹಕರಿಗೆ ನೂತನ ಮಹಿಂದ್ರಾ ವಾಹನಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನೂತನ ಮಹಿಂದ್ರಾ ವಾಹನದ ಕೀಯನ್ನು ಪಡೆದ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಮಾತನಾಡಿ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ನೂತನ ವಾಹನದ ಕೀಯನ್ನು ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಮಹಿಂದ್ರಾ ಅಂಡ್ ಮಹಿಂದ್ರಾ ಸಂಸ್ಥೆಯ ಉಪಾಧ್ಯಕ್ಷರಾದ ಬನೇಶ್ವರ್ ಬ್ಯಾನರ್ಜಿ, ಸಚಿನ್ ಗುಪ್ತಾ, ಅನಂತ್ ಕಾರ‍್ಸ್ ಆಟೋ ಪ್ರೈ ಲಿ.,ನ ಸಿ.ಭಾಸ್ಕರ್, ಸೀನಿಯರ್ ವೈಸ್ ಪ್ರೆಸಿಡೆಂಟ್‌ನ ಬಸಂತ್ ಪಾಟೀಲ್ ಮತ್ತಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು