ವರದಿ: ವಿಶ್ವನಾಥ್, ಹಿರಿಯ ವರದಿಗಾರರು
ಪಾಂಡವಪುರ : ಬೆಳ್ಳಂ ಬೆಳಗ್ಗೆ ಪಾಂಡವಪುರ ತಾಲ್ಲೂಕು ಮಹದೇಶ್ವರ ಗ್ರಾಮದ ಬಳಿಯ ಚಾಮರಾಜನಗರ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಬ್ಬ ಯುವತಿ ಮತ್ತು ಮಹಿಳೆ ಬಲಿಯಾಗಿರುವ ದಾರುಣ ಘಟನೆ ನಡೆದಿದ್ದು, ಮತ್ತೊಬ್ಬ ಮಹಿ¼ಯÉ ಸ್ಥಿತಿ ಚಿಂತಾಜನಕವಾಗಿದೆ.
ಪಾಂಡವಪುರ ತಾಲ್ಲೂಕು ನೀಲನಹಳ್ಳಿ ಗ್ರಾಮದ ಶಿವಣ್ಣೇಗೌಡರ ಪತ್ನಿ ಶಿಲ್ಪಶ್ರೀ(34) ಮತ್ತು ಅದೇ ಗ್ರಾಮದ ಪ್ರದೀಪ ಎಂಬವರ ಮಗಳು ಸಂಧ್ಯಾ (17) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಮೃತ ಸಂಧ್ಯಾ ಅವರ ತಾಯಿ ಶೈಲಜಾ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ :
ಗಾಯಗೊಂಡಿರುವ ಶೈಲಜಾ ಮತ್ತು ಆಕೆಯ ಗೆಳತಿ ಮೃತ ಶಿಲ್ಪಶ್ರೀ ಅವರು ಪಾಂಡವಪುರ ರೈಲ್ವೆ ನಿಲ್ದಾಣದ ಮೂಲಕ ರೈಲಿನಲ್ಲಿ ತಿರುಪತಿ ಪ್ರವಾಸಕ್ಕೆ ಹೊರಟಿದ್ದರು. ಅವರನ್ನು ಮಹದೇಶ್ವರಪುರ ಬಸ್ ನಿಲ್ದಾಣಕ್ಕೆ ಬಿಡಲು ಮೃತ ಸಂಧ್ಯಾ ತಮ್ಮ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ನಾಗಮಂಗಲ ಮಾರ್ಗವಾಗಿ ಮೈಸೂರಿನ ಕರೆ ಹೊರಟಿದ್ದ ಲಾರಿಯು ಮಹದೇಶ್ವರ ಗ್ರಾಮದ ಬಳಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಶಿಲ್ಪಶ್ರೀ ಮತ್ತು ಸಂಧ್ಯಾ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶೈಲಜಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಡಿವೈಎಸ್‌ಪಿ ಮುರುಳಿ, ಮೇಲುಕೋಟೆ ಪಿಎಸ್‌ಐ ಪ್ರಮೋದ್, ಹೆಚ್‌ಸಿ ತಾಂಡವಮೂರ್ತಿ, ಪಾಂಡವಪುರ ಇನ್ಸ್‌ಪೆಕ್ಟರ್ ವಿವೇಕ್ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರೂ ಸಹ ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
0 ಕಾಮೆಂಟ್‌ಗಳು