ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ


ಮೈಸೂರು : ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಯಿತು.

ಲಷ್ಕರ್ ಮೊಹಲ್ಲಾದ ಸರ್ಕಾರಿ ಉರ್ದು ಹೆಚ್‍ಪಿಬಿಎಸ್ ಶಾಲೆಯ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದು ಠಾಣೆಯ ಪರಿಚಯ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲಾ ಮಕ್ಕಳು ಪೊಲೀಸರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ನಂತರ ಪೊಲೀಸರು ಮಕ್ಕಳಿಗೆ ಬಿಸ್ಕತ್ ನೀಡಿ ಉಪಚರಿಸಿ ಕಳುಹಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳೂ ಆದ ಪಿಎಸ್‍ಐ ಅನಿಲ್ ಕುಮಾರ್, ಎಎಸ್‍ಐ ಸಿ.ಕೆ.ಕುಮಾರಸ್ವಾಮಿ, ಕಾನ್ಸ್‍ಟೇಬಲ್ ಸವಿತ ಮತ್ತು ಶಾಲಾ ಶಿಕ್ಷಕಿಯರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು