ಮೈಸೂರಿನಲ್ಲಿ ಶ್ರೀ ಕುಮರನ್ ಜ್ಯುವೆಲರ್ಸ್ ನೂತನ ಆಭರಣ ಮಳಿಗೆ ಪ್ರಾರಂಭ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದ ಕೂಗಳತೆ ದೂರದ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಶ್ರೀ ಕುಮರನ್‌ ಜ್ಯುವೆಲರ್ಸ್‌ ನೂತನ ಆಭರಣ ಮಳಿಗೆ ಉದ್ಘಾಟನೆ ಮಾಡಲಾಯಿತು.
ಶ್ರೀ ಕುಮರನ್ ಜ್ಯುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷರಾದ ಟಿ.ಕೆ.ಚಂದ್ರನ್ ಅವರು ಟೇಪ್‌ ಕತ್ತರಿಸುವ ಮೂಲಕ ನೂತನ ಮಳಿಗೆ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಮೈಸೂರಿನಲ್ಲಿ ಜೊತೆಗೆ. ಶ್ರೀಮತಿ ಸೆ ಚಂದ್ರಅರಮನೆಗಳ ನಗರಿ ಮತ್ತು ಸಾಂಸ್ಕೃತಿಕ ನಗರಿ ಎಂದೇ ಪ್ರಖ್ಯಾತವಾಗಿರುವ ಮೈಸೂರಿನಲ್ಲಿ ಶ್ರೀ ಕುಮರನ್‌ ಜ್ಯುವೆಲರ್ಸ್‌ನ 48ನೇ ಶಾಖೆಯನ್ನು ಪ್ರಾರಂಭ ಮಾಡಲು ಹರ್ಷವಾಗಿದೆ. ಈ ಮೂಲಕ ನಮ್ಮ ಗುಣಮಟ್ಟದ ಚಿನ್ನಾಭರಣಗಳ ಮಾರಾಟವನ್ನು ಕರ್ನಾಟಕ ರಾಜ್ಯದಲ್ಲಿ ಪ್ರಾರಂಭಿಸಿದ್ದು,   ಶೀಘ್ರದಲ್ಲೆ ಕರ್ನಾಟಕದ ವಿವಿಧ ಕೇಂದ್ರಗಳಲ್ಲಿ ನಮ್ಮ ಶಾಖೆಯನ್ನು ವಿಸ್ತರಿಸಲಾಗುವುದು. ನಮ್ಮಲ್ಲಿ ನವ ನವೀನ, ಅತ್ಯಾಕರ್ಷಕ ಗುಣಮಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ  ಶ್ರೀ ಕುಮರನ್ ಜ್ಯುವೆಲರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ವಿಕ್ರಮ್ ನಾರಾಯಣ್ ಮತ್ತು ಅದಸ್ಯ ವಿಕ್ರಮ್ ಅವರು ಮೊದಲ ಗ್ರಾಹಕರಾಗಿ ಚಿನ್ನಾಭರಣ ಖರೀದಿ ಮಾಡಿದರು,
ಉದ್ಘಾಟನಾ ಸಮಾರಂಭದಲ್ಲಿ ಕೆ.ವಿನಾಯಕಂ,  ಮೀನಾಕ್ಷಿ ವಿನಾಯಕಂ, ವಿ. ವಿಕ್ರಂ ನಾರಾಯಣ್,
ಅದಸ್ಯ ವಿಕ್ರಮ್ ಮತ್ತು ವಿನೀತ್  ಭಾಗವಹಿಸಿದ್ದರು
.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು