ಬಿಜಿಎಸ್ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಮಾನವ ದಿನಾಚರಣೆ

ವರದಿ-ನಾಗಮಂಗಲ ಕುಮಾರ್‌

ನಾಗಮಂಗಲ:  ತಾಲ್ಲೂಕಿನ ಬಿಜಿ ನಗರದ ಆದಿ ಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಮಾನವ ದಿನಾಚರಣೆʼ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕರಾದ ಬಾಬು ಕೃಷ್ಣಮೂರ್ತಿ ಹಾಗೂ ಕೆ.ಎಸ್. ಮಧುಸೂದನ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ. ಕೆ.ಎಸ್. ಮಧುಸೂದನ ಅವರು, ಕುವೆಂಪು ಅವರ ʼಶಂಕರಾಚಾರ್ಯʼ ಎಂಬ ಪದ್ಯವನ್ನು ಉಲ್ಲೇಖಿಸುತ್ತ ಬದುಕು ಮಾಯೆ ಎಂದು ಉಪದೇಶಿಸಿದ ಶಂಕರಾಚಾರ್ಯರು ಹೇಗೆ ಮಾನವೀಯ ಸ್ಪಂದನೆಯನ್ನು ಉಳಿಸಿಕೊಂಡಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಇಂದಿನ ವಿಜ್ಞಾನಿಗಳೂ ಸಹ ಅಂದಿನ ಅದ್ವೈತದ ಒಳನೋಟವನ್ನೇ ತಲುಪಿದ್ದಾರೆಎಂದು ಹೇಳಿದರು.
2022ನೇ ಸಾಲಿನ ನೋಬೆಲ್ ಪ್ರಶಸ್ತಿಗೆ ಭಾಜನರಾದ ಜಾನ್ ಕ್ಲೂಸರ್, ಅಲೆನ್ ಆಸ್ಪೆಕ್ಟ್, ಆಂಟನ್ ಜ಼ೀಲಿಂಗರ್ ಅವರ ಸಂಶೋಧನೆಗಳನ್ನು ಪ್ರಸ್ತಾಪಿಸಿದ  ಶ್ರೀಗಳುವಾಸ್ತವವೆಂಬುದು ವ್ಯಕ್ತಿನಿಷ್ಠವಾದುದು; ಮಾನುಷ ಚಿತ್ತವಿಕಲ್ಪವು ಲೌಕಿಕ ಮಿಥ್ಯೆಯನ್ನು ಉಂಟು ಮಾಡುತ್ತದೆಎಂಬ ನೋಬೆಲ್ ಪುರಸ್ಕೃತ ಭೌತವಿಜ್ಞಾನಿಗಳ ಕ್ವಾಂಟಮ್ ಭೌತಶಾಸ್ತ್ರದ ಸಂಶೋಧನೆಯ ಫಲಿತವನ್ನು ಸಾಧಾರವಾಗಿ ಉಲ್ಲೇಖಿಸಿದರು.
ಕುವೆಂಪು ಅವರ ರಾಷ್ಟ್ರೀಯ ಪ್ರಜ್ಞೆಯ ಬಗ್ಗೆ ಮಾತನಾಡಿದ ಬಾಬು ಕೃಷ್ಣಮೂರ್ತಿ, ದೇಶದ ಪ್ರತಿಯೊಂದು ಆಗು ಹೋಗುಗಳಿಗೂ ಕುವೆಂಪು ಹೇಗೆ ಸ್ಪಂದಿಸುತ್ತಿದ್ದರು ಎಂದು ತಿಳಿಸಿದರು.
ನಾನು ತೆಲುಗು, ತಮಿಳು, ಮರಾಠಿ ಮುಂತಾದ ಹಲವು ನಾಡಗೀತೆಗಳನ್ನು ಪರಿಶೀಲಿಸಿದ್ದೇನೆ. ಆದರೆ ಕುವೆಂಪು ಅವರಜಯ ಭಾರತ ಜನನಿಯ ತನುಜಾತೆಪದ್ಯದ ವ್ಯಾಪಕತೆ ಮತ್ತು ಐಕ್ಯತೆ ಅನ್ಯ ನಾಡಗೀತೆಗಳಿಗಿಲ್ಲ. ಅದು ಬರೀ ನಾಡಗೀತೆಯಲ್ಲ, ಅಖಂಡ ಭಾರತದ ಏಕತೆಯನ್ನು ಪ್ರತಿನಿಧಿಸುವಂತಹುದು. ಅದಕ್ಕೆ ರಾಷ್ಟ್ರಗೀತೆಗೆ ಸರಿಗಟ್ಟಬಲ್ಲ ಸತ್ವವಿದೆಎಂದು ಅವರು ಹೇಳಿದರು.
ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.. ಶೇಖರ್, ಸಹ ಪ್ರಾಧ್ಯಾಪಕ ಡಾ. ಟಿ.ಎನ್. ವಾಸುದೇವಮೂರ್ತಿ, ವಿವಿ ಸಂಪರ್ಕಾಧಿಕಾರಿ ಡಾ. ಬಿ.ಕೆ. ನರೇಂದ್ರ, ಬಿಜಿಎಸ್‌ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ಶೋಭಾ, ಎಂ. ಜಿ. ಶಿವರಾಮು, ಡಾ. ಭಾರತಿ ಡಿ. ಆರ್., ಪ್ರೊ. ಚಂದ್ರಶೇಖರ್, ಡಾ. . ಟಿ. ಶಿವರಾಮು, ಎನ್. ಆರ್. ರೋಹಿತ್, ಪ್ರೊ. ಗಿರಿಯಣ್ಣ, ಡಾ. ಶ್ವೇತಾ ಹಾಜರಿದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು