ಮೈಸೂರು : ಆಷಾಢ ಮಾಸದ ಪ್ರಯುಕ್ತ ಮೈಸೂರು ವಿಜಯನಗರದ ಜೇನುಗೂಡು ಸೇವಾ ಸಮಿತಿ ವತಿಯಿಂದ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೇನುಗೂಡು
ಸೇವಾ ಸಮಿತಿಯ ಮಾಲಾ ಮಹೇಂದ್ರ ಅವರು ಮಾತನಾಡಿ, ಕಳೆದ
ಹದಿನೈದು ವರ್ಷಗಳಿಂದ ಸತತವಾಗಿ ನಮ್ಮ ಸಂಸ್ಥೆ ವತಿಯಿಂದ ತಾಯಿ ಚಾಮುಂಡೇಶ್ವರಿಯ ಪೂಜಾ ಕಾರ್ಯಕ್ರಮ
ನೆರವೇರಿಸುತ್ತಾ ಬರುತ್ತಿದ್ದು, ಎಂದಿನಂತೆ ಈ ಬಾರಿಯೂ ಕೂಡಾ ಅತ್ಯಂತ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಗಿದೆ,
ವಿಜಯನಗರ ಹಾಗೂ ಸುತ್ತಮುತ್ತಲಿನ ಸುಮಾರು ೫ಸಾವಿರಕ್ಕೂ ಹೆಚ್ಚು ಭಕ್ತರಿಗೆ ಮಾಂಸಾಹಾರ ಮತ್ತು ಸಸ್ಯಾಹಾರ
ಊಟದ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ತಾಯಿಯ ಕೃಪೆಯಿಂದ ಇನ್ನೂ ದೊಡ್ಡ ಮಟ್ಟದಲ್ಲಿ
ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.
ಈ ವೇಳೆ, ನಗರ ಪಾಲಿಕೆ
ಸದಸ್ಯ ಎಸ್‌ಬಿಎಂ ಮಂಜು, ರಾಧಾ ಸಂದೀಪ್, ಕವೀಶ್
ಗೌಡ, ನವೀಶ್ ಗೌಡ, ರುತಿಕ್, ರತನ್ ಚಿಕ್ಕು, ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು